ಚಿಕ್ಕಮಗಳೂರು : ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಾಳೆ ಸಂಜೆ ಗೊತ್ತಾಗುತ್ತದೆ. ಬೇಕಾದಷ್ಟು ವಿಷಯ ಇದೆ, ಗ್ಯಾರಂಟಿ ಗೊಂದಲಗಳ ಬಗ್ಗೆ ಬಜೆಟ್ ವೇಳೆ ಎಲ್ಲಾ ಚರ್ಚೆ ಆಗುತ್ತದೆ. ಗ್ಯಾರಂಟಿಗಳನ್ನ ಗೊಂದಲದ ಗೂಡು ಮಾಡಿದ್ದಾರೆ, ಎಲ್ಲಾ ಚರ್ಚೆ ಆಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನೋಟೀಸ್ ಕ್ಯಾರೇ ಅನ್ನದ ನಾಯಕರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲವನ್ನೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಾ ಬೆಂಗಳೂರಿನಲ್ಲೇ ಮಾತನಾಡ್ತೀವಿ. ನಾವು ಬಂದಿರೋದು ಅಶೋಕ್ ಹುಟ್ಟುಹಬ್ಬ ಆಚರಣೆಗೆ ಅಷ್ಟೆ ಎಂದರು.
ಇದನ್ನೂ ಓದಿ: Maharastra: ಹೊತ್ತಿ ಉರಿಯುತ್ತಿದ್ದ ಬಸ್ಸಿನ ಕಿಟಕಿಯ ಗಾಜು ಒಡೆದು ನಾನು ಪಾರಾದೆ, ಆದರೆ…
ನೋಡೋಣ ಏನೇನು ಮಾಡ್ತಾರೆ, 200 ಯೂನಿಟ್ ಅಂದ್ರು, ವರ್ಷದ ಸರಾಸರಿ ಅಂದರು ನೋಡೋಣ. ಬಹಳ ಗೊಂದಲ ಮಾಡಿ, ಪವರ್ ರೇಟ್ ಕೂಡ ಹೆಚ್ಚು ಮಾಡಿದ್ದಾರೆ ಜನರಿಗೆ ಎಲೆಕ್ಟ್ರಿಕ್ ಶಾಕ್ ಕೂಡ ನೀಡಿದ್ದಾರೆ, ನೋಡೋಣ ಮುಂದೆ ಏನ್ಮಾಡ್ತಾರೆ ಎಂದು ಹೇಳಿದರು.
ಹುಟ್ಟು ಹಬ್ಬಕ್ಕೆ ಪ್ರತಿ ವರ್ಷನೂ ಚಿಕ್ಕಮಗಳೂರಿಗೆ ಬರ್ತಿನಿ. ಪ್ಲೆಕ್ಸ್ ಬ್ಯಾನರ್ ಎಲ್ಲ ಜಾಸ್ತಿಯಿರುತ್ತದೆ, ಸನ್ಮಾನವಿರುತ್ತದೆ. ಮೊದಲು ಇಲ್ಲಿ ಬಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ಕಳೆದ ಬಾರಿ ಸಿ.ಟಿ.ರವಿ ಇದ್ರು ರಾಮಮಂದಿರಕ್ಕೆ ಹೋಗಿದ್ವಿ. ಈ ಬಾರಿಯೂ ದೇವಸ್ಥಾನಕ್ಕೆ ಹೋಗಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಆರ್.ಆಶೋಕ್ ಹೇಳಿದರು.