Advertisement

Former Chief Minister ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ

11:22 AM Sep 26, 2023 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.

Advertisement

ಅವರಿಗೆ 93 ವರ್ಷ ವಯಸ್ಸಾಗಿತ್ತು. ಮಾಜಿ ಶಾಸಕ ಕೈಲಾಸನಾಥ್ ಪಾಟೀಲ ಮತ್ತು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.

ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಪಟ್ಟಣದ ವೀರೇಂದ್ರ ಪಾಟೀಲ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನದಲ್ಲಿ ಚಿಂಚೋಳಿ ಮುಖ್ಯ ರಸ್ತೆಯಲ್ಲಿರುವ ಪಟ್ಟಣದ ದಿ.ವೀರೇಂದ್ರ ಪಾಟೀಲ ರವರ‌ ಸಮಾಧಿ ಪಕ್ಕದಲ್ಲೇ ಶಾರದಾ ಪಾಟೀಲರ ಅಂತ್ಯಕ್ರಿಯೆ ಬುಧವಾರ ಅಪರಾಹ್ನ ನಡೆಯಲಿದೆ ಎಂದು ಕೈಲಾಸನಾಥ ಪಾಟೀಲ ತಿಳಿಸಿದ್ದಾರೆ.

ದಿ.ಶಾರದಾಬಾಯಿ ನಿಧನಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಡಾ.ಅವಿನಾಶ್ ಜಾಧವ್, ಸಂಸದ ಡಾ.ಉಮೇಶ ಜಾಧವ್, ಪಟ್ಟಣದ ಬಾಬುರಾವ ಪಾಟೀಲ, ಸುಭಾಷ್ ರಾಠೋಡ, ಬಸವರಾಜ ಮಲಿ,ರೇವಣಸಿದ್ದ ಯಾಲಾಲ,ಶಂಕರ ‌ಅಲ್ಲಾಪುರ, ಸುಭಾಷ್ ಸೀಳಿನ, ಶಿವಪುತ್ರಪ್ಪ, ವೀರಶೈವ ‌ಲಿಂಗಾಯತ ಸಮಾಜದ ಮುಖಂಡರು ಡಿಸಿಸಿ ಬ್ಯಾಂಕ್ ‌ನಿರ್ದೇಶಕ ‌ಗೌತಮ‌ಪಾಟಿಲ, ಮಸ್ತಾನ ಅಲಿ ಪಟ್ಟೆದಾರ, ಬಸವರಾಜ ಸಜ್ಜನಶೆಟ್ಟಿ, ಪತ್ರಕರ್ತ ಶಾಮರಾವ ಚಿಂಚೋಳಿ, ಬಾಸಿತ,‌ ಕಾಂಗ್ರೆಸ,ಬಿಜೆಪಿ, ಜೆಡಿಎಸ ಪಕ್ಷದ ಮುಖಂಡರು ಕಂಬನಿ‌ಮಿಡಿದು ಶೋಕ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next