Advertisement
ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಕುಂಭೇಶ್ವರ ಕಾಂಫ್ಲೆಕ್ಸ್‌ನ ಹಿತೈಷಿ ಇಎಫ್ವಿ ಎಲೆಕ್ಟ್ರಿಕಲ್ ವಾಹನಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಅವರನ್ನು ಯಾವ ರೀತಿ ಬೇಕಾದರೂ ಟೀಕಿಸುವುದು ತರವಲ್ಲ. ಒಬ್ಬ ವ್ಯಕ್ತಿಯನ್ನು ಟೀಕಿಸುವಾಗ ನೂರು ಬಾರಿ ಯೋಚಿಸಬೇಕು. ಬಾಯಿ ಚಪಲಕ್ಕೆ ಏನೂ ಬೇಕಾದರೂ ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಲೆತಗ್ಗಿಸುವ ಹೇಳಿಕೆಯಾಗಿದೆ.
Related Articles
Advertisement
ಪ್ರಚಾರ ಕಾರ್ಯ: ಸಿಂಧಗಿ ಮತ್ತು ಹಾನಗಲ್ ವಿಧಾಸ ಭಾಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಈ ಎರಡು ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್ಸಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಎಂದರು.
ಎತ್ತಿನ ಹೊಳೆ ಯೋಜನೆ ನಾನು ಮಾಡಿದ್ದು, ಕಾಂಗ್ರೆಸ್ ಸರ್ಕಾರಿ ವಿಭಾಗ 12 ಸಾವಿರ ಕೋಟಿ ಖರ್ಚು ಮಾಡಿ, ಯೋಜ ನೆಗೆ ವೇಗ ನೀಡಿದ್ದೇವೆ. ಎಚ್.ಎನ್.ವ್ಯಾಲಿ ಯೋಜನೆ, ಕೆ.ಸಿ. ವ್ಯಾಲಿ ಯೋಜನೆ ಜಾರಿಗೆ ತಂದಿ ದ್ದು, ಕಾಂಗ್ರೆಸ್ ಸರ್ಕಾರ, ಈ ಯೋಜನೆಗಳಡಿ ನೀರು ಹರಿಸಿ ದ್ದರಿಂದಲೇ ಇಂದು ಸಾಕಷ್ಟು ಕೆರೆಗಳು ಕೋಡಿ ಹರಿಯುವಂತಾಗಿದೆ ಎಂದರು.
ನೀರು ಕೊಡಬಹುದು: ಕೃಷ್ಣಾ ಮೇಲ್ದಂಡೆ ಯೋಜನೆ ಯಡಿ ಸರ್ಕಾರ, 10 ಟಿಎಂಸಿ ನೀರು ಕೊಡಲಿಕ್ಕೆ ಪ್ರತ್ಯೇಕ ಮಾಡಿ, ಆಂಧ್ರ ಸರ್ಕಾರದ ಅನುಮತಿ ಪಡೆದು ಕೊಂಡ ದರೆ, ಬಾಗೇ ಪಲ್ಲಿಯ ಮೂಲಕ ಈ ಭಾಗಕ್ಕೆ ನೀರು ಹರಿಸಲಿಕ್ಕೆ ಸಾಧ್ಯವಾಗುತ್ತದೆ. ನಾನು ಮುಖ್ಯ ಮಂತ್ರಿಯಾಗಿದ್ದಾಗ ಆಲಮಟ್ಟಿ ಡ್ಯಾಂನ್ನು 524 ಮೀಟರ್ ಏರಿಕೆ ಮಾಡಿದ್ದಾರೆ, ಈಗ 10 ಟಿಎಂಸಿ ನೀರು ಕೊಡು ವುದು ಕಷ್ಟವೇನಲ್ಲ, ಸರ್ಕಾರ ಮನಸ್ಸು ಮಾಡಿದರೆ ಈ ಭಾಗಕ್ಕೆ ನೀರು ಕೊಡಬಹುದು ಎಂದರು.
ಮಾಜಿ ಶಾಸಕ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್, ಜಿಪಂ ಮಾಜಿ ಸದಸ್ಯ ಲಕ್ಷಿ¾àನಾರಾಯಣ್, ಕೆ.ಸಿ.ಮಂಜುನಾಥ್, ಕೆಪಿಸಿಸಿ ಸದಸ್ಯ ಚೇತನ್‌ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್, ಪುರಸಭಾ ಅಧ್ಯಕ್ಷ ರೇಖಾ, ತಾಪಂ ಮಾಜಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಭೂ ಮಂಜೂರಾತಿ ಮಾಜಿ ಸದಸ್ಯ ಸೋಮಶೇಖರ್, ಖಾದಿ ಬೋರ್ಡ್ ಅಧ್ಯಕ್ಷ ಎಸ್. ನಾಗೇಗೌಡ, ಸದಸ್ಯ ಮುನಿರಾಜು, ಭೂನ್ಯಾಯಮಂಡಲಿ ಮಾಜಿ ಸದಸ್ಯ ಮುನಿರಾಜು,ಹಿತೈಷಿ ಇಎಪ್‌ವಿ ಮಾಲೀಕ .ಜಿ. ಶಿವಮೂರ್ತಿ, ಚಂದನ್ ಕುಮಾರ್, ಕಿಶೋರ್ ಹಾಗೂ ಮತ್ತಿತರರು ಇದ್ದರು.
ಭೂ-ಸ್ವಾಧೀನ ಪ್ರಕ್ರಿಯೆ ಸಮಸ್ಯ ಬಗೆಹರಿಸಿ: ಮೊಯ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಎತ್ತಿನಹೊಳೆ ಯೋಜನೆ ವೇಗ ಕುಂಠಿತವಾಗಿದೆ. ದೊಡ್ಡಬಳ್ಳಾಪುರ, ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಭಾಗದ ರೈತರಿಗೆ ಸಮಾನವಾಗಿ ಪರಿಹಾರ ಕೊಟ್ಟು, ಭೂ-ಸ್ವಾಧೀನ ಪ್ರಕ್ರಿಯೆಗೆ ಇರುವ ತೊಡುಕುಗಳನ್ನು ನಿವಾರಣೆ ಮಾಡಬೇಕು.
ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ನಾವು ಸಂಸದರಾಗಿದ್ದಾಗ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಬಿಜೆಪಿ ಸರ್ಕಾರ ಇರುವುದರಿಂದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಕೊರಟೆಗೆರೆ ತಾಲೂಕಿನ ಬೈರಗೊಂಡ್ಲು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.