Advertisement

ಜೈನ ಸನ್ಯಾಸತ್ವದತ್ತ ಮಾಜಿ ಮುಖ್ಯಮಂತ್ರಿ ಉಮಾಭಾರತಿ

12:49 AM Nov 06, 2022 | Team Udayavani |

ಭೋಪಾಲ್‌: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ಜೈನ ಧರ್ಮದ ಅನುಸಾರ ಸನ್ಯಾಸ ಸ್ವೀಕರಿಸಲು ಮುಂದಾಗಿದ್ದಾರೆ.

Advertisement

ನ.17ರಂದು ಅಧಿಕೃತವಾಗಿ ಸನ್ಯಾಸ ಧರ್ಮ ಸ್ವೀಕರಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಕರ್ನಾಟಕ ಮೂಲದ ಗುರು ಜೈನ ಸಂತ ಆಚಾರ್ಯ ವಿದ್ಯಾಸಾಗರ್‌ ಮಹಾರಾಜ್‌ ಅವರ ಆದೇಶದಂತೆ ಸನ್ಯಾಸ ಧರ್ಮ ಸ್ವೀಕರಿಸುತ್ತಿದ್ದೇನೆ. ನನ್ನ ಕುಟುಂಬ ಸೇರಿ ದಂತೆ ಎಲ್ಲ ಐಹಿಕ ಬಂಧನಗಳಿಂದ ಮುಕ್ತ ವಾಗಿ, ಇನ್ನು ಮುಂದೆ “ದೀದಿ ಮಾ’ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತೇನೆ’ಎಂದಿದ್ದಾರೆ.

1997ರ ನ.17ರಂದು ಮಧ್ಯಪ್ರದೇಶದ ಅಮರ್‌ಕಂಟಕ್‌ನಲ್ಲಿ ಹಿಂದೂ ಧರ್ಮದ ಅನುಸಾರ ಉಮಾ ಭಾರತಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದರು. ಉಮಾಶ್ರೀ ಭಾರತಿ ಆಗಿದ್ದ ಅವರು ಸನ್ಯಾಸದ ಅನಂತರ ಉಮಾ ಭಾರತಿ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next