Advertisement

ಛತ್ತೀಸ್‌ಗಢ ಮಾಜಿ ಸಿಎಂ ಜೋಗಿ ತೀವ್ರ ಅಸ್ವಸ್ಥ; ವೆಂಟಿಲೇಟರ್‌ನಲ್ಲಿ

12:28 PM May 31, 2018 | Team Udayavani |

ಗುರುಗ್ರಾಮ: ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಹರಿಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸೇರಿಸಲಾಗಿದೆ; ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 

Advertisement

ಜೋಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು “ಜೋಗಿ ಅವರ ದೇಹಸ್ಥಿತಿ ಸ್ಥಿರವಾಗಿದೆ’ ಎಂದು ಹೇಳಿದ್ದಾರೆ. 

ನ್ಯೂಮೋನಿಯಾ ಪೀಡಿತರಾಗಿದ್ದ ಮಾಜಿ ಐಎಎಸ್‌ ಅಧಿಕಾರಿ ಹಾಗೂ ಛತ್ತೀಸ್‌ಗಢದ ಮೊದಲ ಮುಖ್ಯಮಂತ್ರಿಯಾಗಿರುವ ಅಜಿತ್‌ ಜೋಗಿ ಅವರನ್ನು ನಿನ್ನೆ ಬುಧವಾರ ಅಂಬುಲೆನ್ಸ್‌ನಲ್ಲಿ ಮೇದಾಂತ ಆಸ್ಪತ್ರೆಗೆ ತರಲಾಗಿತ್ತು. 

72ರ ಹರೆಯದ ಛತ್ತೀಸ್‌ಗಢದ ಜನತಾ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥರಾಗಿರುವ ಜೋಗಿ ಅವರು ರಾಯ್‌ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜೋಗಿ ಅವರು ಪ್ರಕೃತ ವೆಂಟಿಲೇಟರ್‌ನಲ್ಲಿ ಇದ್ದಾರೆ; ಆದರೂ ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಹಿರಿಯ ಮೆಡಿಕಲ್‌ ಸುಪರಿಂಟೆಂಡೆಂಟ್‌ ಡಾ. ಎ ಕೆ ದುಬೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next