ಬೆಂಗಳೂರು: ದೇಶದ ಯುವ ಜನತೆಯ ಕನಸುಗಳ ಜೊತೆ ಚೆಲ್ಲಾಟವಾಡುವ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನ ಹಿರಿಯ ಮುಖಂಡ ಪಲ್ಲಂ ರಾಜು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಅಗ್ನಿಪಥ್ ಯೋಜನೆ ಯುವಜನತೆಯ ಆಕಾಂಕ್ಷೆಯ ನಡುವೆ ಚೆಲ್ಲಾಟ ನಡೆಸುವ ಯೋಜನೆ ಆಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವೈಜ್ಞಾನಿಕ ರೈತ ವಿರೋಧಿ ನೀತಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ಹೋರಾಟ ನಡೆಸಿ 700 ರೈತರ ಸಾವಿಗೆ ಕಾರಣರಾದರು. ದೇಶದ ಭದ್ರತಾ ಹಿತದೃಷ್ಟಿಯಿಂದ, ಯುವಕರ ಭವಿಷ್ಯತ್ತಿನ ದೃಷ್ಟಿಯಿಂದ ಆ ಇತಿಹಾಸ ಮರುಕಳಿಬಾರದು ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಆಯ್ತು,ಈಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರೆ: HDK ವಾಗ್ದಾಳಿ
ಅಗ್ನಿಪಥ್ ಯೋಜನೆ ಬಿಜೆಪಿ ಸರ್ಕಾರದ ಮತ್ತೊಂದು ದುರುದ್ದೇಶ ಪೂರಿತ ಅಡಚಣೆ ಸೃಷ್ಟಿಸಿದೆ. ಇದರಿಂದಾಗಿ ದೇಶದ ಭದ್ರತೆಗೆ ಸಂಬಂಧಿಸಿದ ಈಗಾಗಲೇ ಇರುವ ಸಮಸ್ಯೆಗಳ ಜತೆಗೆ ಹೊಸ ಸಮಸ್ಯೆ ಉಂಟಾಗಲಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೆ ಈ ಯೋಜನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.