Advertisement

Football: ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಹಬೀಬ್‌ ನಿಧನ

11:49 PM Aug 15, 2023 | Team Udayavani |

ಹೊಸದಿಲ್ಲಿ: ಭಾರತ ಫ‌ುಟ್‌ಬಾಲ್‌ ಕಂಡ ಸರ್ವಶ್ರೇಷ್ಠ ಆಟಗಾರರಲ್ಲೊಬ್ಬರಾದ ಮೊಹಮ್ಮದ್‌ ಹಬೀಬ್‌ ಮಂಗಳವಾರ ನಿಧನ ಹೊಂದಿದರು. 74 ವರ್ಷದ ಅವರು ಡಿಮೆನ್ಶಿಯ ಮತ್ತು ಪಾರ್ಕಿನ್ಸನ್‌ ಕಾಯಿಲೆ ಯಿಂದ ನರಳುತ್ತಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು, 1970ರ ದಶಕದಲ್ಲಿ ತಮ್ಮ ಮಿಂಚಿನ ಕಾಲ್ಚಳಕದಿಂದ ಹೆಸರಾಗಿದ್ದರು.

Advertisement

ಪೀಲೆ ಆಡುತ್ತಿದ್ದ ಪ್ರತಿಷ್ಠಿತ ನ್ಯೂಯಾರ್ಕ್‌ ಕಾಸ್ಮೋಸ್‌ ವಿರುದ್ಧ ಮೋಹನ್‌ ಬಗಾನ್‌ ಪರ ಆಡಿದ್ದ ಹಬೀಬ್‌ ಗೋಲು ಬಾರಿಸಿದ್ದರು. 1970ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ತಂಡ ಕಂಚು ಗೆಲ್ಲಲು ನೆರವಾಗಿದ್ದರು. ಹೈದರಾಬಾದ್‌ನಲ್ಲಿ ಹುಟ್ಟಿದ ಅವರು, ಹೈದರಾಬಾದ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ.c

Advertisement

Udayavani is now on Telegram. Click here to join our channel and stay updated with the latest news.

Next