Advertisement

ಮಾಜಿ ಬಾಕ್ಸಿಂಗ್‌ ಚಾಂಪಿಯನ್‌ ಡುರಾನ್‌ಗೆ ಕೋವಿಡ್-19 ಸೋಂಕು

10:23 PM Jun 26, 2020 | Sriram |

ಪನಾಮಾ: ಬಾಕ್ಸಿಂಗ್‌ ಲೆಜೆಂಡ್‌, ಮಾಜಿ ವಿಶ್ವ ಚಾಂಪಿಯನ್‌ ರಾಬರ್ಟೊ ಡುರಾನ್‌ ಅವರಿಗೆ ಕೋವಿಡ್-19 ಸೋಂಕು ಅಂಟಿಕೊಂಡಿದೆ.

Advertisement

“ಫ್ಲೂ ‘ನಂಥ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಗ ಕೋವಿಡ್‌-19 ಪಾಸಿಟಿವ್‌ ಇರುವುದು ಪತ್ತೆಯಾಯಿತು ಎಂದು ಅವರ ಪುತ್ರ ರಾಬಿನ್‌ ಡುರಾನ್‌ ಹೇಳಿದ್ದಾರೆ.

“ತಂದೆಯೇನೂ ಗಂಭೀರ ಸ್ಥಿತಿಯಲ್ಲಿಲ್ಲ. ಅವರ ಶ್ವಾಸಕೋಶಕ್ಕೆ ಯಾವುದೇ ಹಾನಿ ಆಗಿಲ್ಲ. ಸೋಂಕಿನ ವಿಶೇಷ ಲಕ್ಷಣಗಳೂ ಕಂಡುಬಂದಿಲ್ಲ. ವೈದ್ಯರು ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಶೀಘ್ರವೇ ಗುಣಮುಖರಾಗುವ ವಿಶ್ವಾಸವಿದೆ’ ಎಂದು ರಾಬಿನ್‌ ಹೇಳಿದರು.

69 ವರ್ಷದ ರಾಬರ್ಟೊ ಡುರಾನ್‌ 5 ದಶಕಗಳ ಕಾಲ ಬಾಕ್ಸಿಂಗ್‌ ಅಖಾಡದಲ್ಲಿ ಮೆರೆದು 2002ರಲ್ಲಿ ನಿವೃತ್ತರಾಗಿದ್ದರು. 4 ವಿವಿಧ ವಿಶ್ವ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 103 ಗೆಲುವು, 70 ನಾಕ್‌ಟ್ಸ್‌ ಮತ್ತು 16 ಸೋಲು ಇವರ ಒಟ್ಟಾರೆ ಬಾಕ್ಸಿಂಗ್‌ ದಾಖಲೆಯಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next