Advertisement

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

06:47 PM Oct 04, 2023 | Team Udayavani |

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯ(BMTC) ಮಾಜಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಒಬ್ಬರನ್ನು ಹಿರಿಯ ಅಧಿಕಾರಿಗಳ ನಕಲಿ ಸಹಿ ಮತ್ತು ಕಳೆದ ಮೂರು ವರ್ಷಗಳಲ್ಲಿ ಅನರ್ಹ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಬಿಎಂಟಿಸಿಗೆ 17 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟುಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Advertisement

ಬಂಧಿತ ಆರೋಪಿ ಶ್ರೀರಾಮ್ ಮುಲ್ಕವನ ಎನ್ನುವವರಾಗಿದ್ದು, ಆಪಾದಿತ ವಂಚನೆಗೆ ಸಂಬಂಧಿಸಿದಂತೆ ಬಿಎಂಟಿಸಿ ನಡೆಸಿದ ಆಂತರಿಕ ತನಿಖೆಯ ಸಮಯದಲ್ಲಿ ಹೆಸರು ಹೊರಬಂದ ನಂತರ ಬಿಎಂಟಿಸಿಯ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡಿದ ಶ್ರೀರಾಮ್ ಸೇರಿ ಇತರ ಆರು ಸಹೋದ್ಯೋಗಿಗಳನ್ನು ಅಮಾನತುಗೊಳಿಸಲಾಗಿತ್ತು.

ಅಸಿಸ್ಟೆಂಟ್ ಸೆಕ್ಯುರಿಟಿ ಮತ್ತು ವಿಜಿಲೆನ್ಸ್ ಅಧಿಕಾರಿ ರಮ್ಯಾ ಸಿ.ಕೆ. ಗಂಭೀರ ವಂಚನೆಯನ್ನು ಪತ್ತೆ ಹಚ್ಚಿದ ನಂತರ ಅಕ್ಟೋಬರ್ 2 ರಂದು ಅಮಾನತುಗೊಂಡ ಏಳು ಬಿಎಂಟಿಸಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ದೂರುದಾರರ ಪ್ರಕಾರ, ಆಪಾದಿತ ವಂಚನೆಯಿಂದಾಗಿ ನಿಗಮವು ಒಟ್ಟು 17 ಕೋಟಿ ರೂ.ಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಮಾರ್ಚ್ 2020 ರಿಂದ ಸೆಪ್ಟೆಂಬರ್ 2023 ರ ನಡುವೆ ವಂಚನೆ ನಡೆದಿದೆ ಎಂದು ಹೇಳಲಾಗಿದೆ, ಇದರಿಂದಾಗಿ ನಿಗಮವು ಎರಡು ವಿಭಿನ್ನ ಪ್ರಕರಣಗಳಲ್ಲಿ 10.5 ಕೋಟಿ ರೂ. ಮತ್ತು 6.91 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next