Advertisement

ರಾಜಸ್ಥಾನ ಸಿಎಂ ವಿರುದ್ಧ ಮಾಜಿ ಬಿಜೆಪಿ ನಾಯಕ ಮನ್ವೇಂದ್ರ ಸ್ಪರ್ಧೆ

04:23 PM Nov 17, 2018 | udayavani editorial |

ಜೈಪುರ : ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ  ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ಝಾಲಾರ್‌ಪಟನ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಬಿಜೆಪಿ ನಾಯಕ ಮನ್ವೇಂದ್ರ ಸಿಂಗ್‌ ಸ್ಪರ್ಧಿಸಲಿದ್ದಾರೆ. 

Advertisement

ಕಾಂಗ್ರೆಸ್‌ ಪಕ್ಷ ಇಂದು ರಾಜಸ್ಥಾನ ವಿಧಾಸಭಾ ಚುನಾವಣೆಯಲ್ಲಿ ಸ್ಫರ್ದಿಸುವ ತನ್ನ 32 ಅಭ್ಯರ್ಥಿಗಳ ಎರಡನೇ ಪಟ್ಟಿನಯನ್ನು ಬಿಡುಗಡೆ ಮಾಡಿತು.

ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಕುಲ್‌ ವಾಸ್ನಿಕ್‌ ಅವರು ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದರು. ನಿನ್ನೆ ಗುರುವಾರ 152 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. 

ರಾಜಸ್ಥಾನ ವಿಧಾನಸಭಾ ಚುನಾವಣೆ ಡಿ.7ರಂದು ನಡೆಯಲಿದ್ದು ಡಿ.11ರಂದು ಮತ ಎಣಿಕೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next