Advertisement

ಚಂದನ್‌, ಇತರರ ಟಿಎಂಸಿ ಸೇರ್ಪಡೆ: ದೃಢಪಡಿಸಿದ ಮಮತಾ

04:58 PM Jul 21, 2018 | udayavani editorial |

ಹೊಸದಿಲ್ಲಿ : ಮಾಜಿ ಬಿಜೆಪಿ ನಾಯಕ ಮತ್ತು ರಾಜ್ಯ ಸಭಾ ಸದಸ್ಯ ಚಂದನ್‌ ಮಿತ್ರಾ, ತೃಣ ಮೂಲ ಕಾಂಗ್ರೆಸ್‌ ಪಕ್ಷ ಸೇರಿರುವುದನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೃಢಪಡಿಸಿದ್ದಾರೆ.

Advertisement

ಇದೇ ವೇಳೆ ಸಿಪಿಎಂ ಸಂಸದ ಮೊಯಿನುಲ್‌ ಹಸನ್‌, ಕಾಂಗ್ರೆಸ್‌ನ ಸಬೀನಾ ಯಾಸ್ಮಿನ್‌ ಮತ್ತು ಮಿಜೋರಾಂ ಅಡ್ವೋಕೇಟ್‌ ಜನರಲ್‌ ಬಿಸ್ವಜಿತ್‌ದೇಬ್‌ ಟಿಎಂಸಿ ಸೇರಿರುವುದಾಗಿ ಮಮತಾ ತಿಳಿಸಿದ್ದಾರೆ. 

‘ನಾವು ಇದೇ ಆಗಸ್ಟ್‌ 15ರಂದು ಬಿಜೆಪಿ ಹಟಾವೋ ದೇಶ್‌ ಬಚಾವೋ ಆಂದೋಲನವನ್ನು ಆರಂಭಿಸಲಿದ್ದೇವೆ; 2019ರಲ್ಲಿ ಬಿಜೆಪಿಗೆ ಭಾರೀ ದೊಡ್ಡ ಹೊಡೆತ ಉಂಟಾಗಲಿದೆ; ಬಂಗಾಲವು ಈ ದಿಶೆಯಲ್ಲಿ ಮಾರ್ಗದರ್ಶಿಯಾಗಿರುತ್ತದೆ’ ಎಂದು ಮಮತಾ ತನ್ನ ಟ್ವೀಟ್‌ನಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next