Advertisement

ಭ್ರಷ್ಟಾಚಾರ ಆರೋಪ; ಆಂಧ್ರಪ್ರದೇಶ ಮಾಜಿ ಸ್ಪೀಕರ್ ನೇಣಿಗೆ ಶರಣು

10:51 AM Sep 17, 2019 | Team Udayavani |

ಆಂಧ್ರಪ್ರದೇಶ: ಆಂಧ್ರಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್, ಟಿಡಿಪಿ ಮುಖಂಡ ಕೋಡೆಲಾ ಶಿವ ಪ್ರಸಾದ್(72) ಹೈದರಾಬಾದ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಭ್ರಷ್ಟಾಚಾರ ಮತ್ತು ಆರ್ಥಿಕ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಕುಟುಂಬದ ಮೂಲಗಳು ದೂರಿವೆ.

Advertisement

ಸೋಮವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಕೂಡಲೇ ಅವರನ್ನು ಬಸವ ತಾರಕರಾಮಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಶಿವಪ್ರಸಾದ್ ಪುತ್ರ ಮತ್ತು ಪುತ್ರಿಯ ಮೇಲೆ ಹಲವಾರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲ ಆಂಧ್ರ ವಿಧಾನಸಭೆಯ ಪೀಠೋಪಕರಣಗಳನ್ನು ಒಯ್ದಿರುವ ಆರೋಪವೂ ಶಿವಪ್ರಸಾದ್ ಮೇಲಿದೆ.

ಕೋಡೆಲಾ ಅವರು ಆರು ಬಾರಿ ಶಾಸಕರಾಗಿ ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. 2014ರಿಂದ 2019ರವರೆಗೆ ಶಿವಪ್ರಸಾದ್ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಆಂಧ್ರಪ್ರದೇಶದಲ್ಲಿ ಎನ್ ಟಿ ರಾಮರಾವ್ ಮತ್ತು ಚಂದ್ರಬಾಬು ನಾಯ್ಡು ಸರಕಾರದಲ್ಲಿ ಶಿವಪ್ರಸಾದ್ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕೋಡೆಲಾ ಶಿವಪ್ರಸಾದ್ ಅವರ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಬಿಜೆಪಿಯ ವಕ್ತಾರ ಕೃಷ್ಣಾ ಸಾಗರ್ ರಾವ್ ಆಘಾತ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next