Advertisement

ಜರ್ಮನಿಯಲ್ಲಿ ಪಿಜ್ಝಾ ಮಾರುತ್ತಿದ್ದಾರೆ ಅಫ್ಘಾನಿಸ್ಥಾನದ ಮಾಜಿ ಸಚಿವ!

11:28 PM Aug 25, 2021 | Team Udayavani |

ಜರ್ಮನಿ: ಕೇವಲ ಒಂದು ವರ್ಷದ ಹಿಂದೆ ಅಫ್ಘಾನಿಸ್ಥಾನದ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸೈಯದ್‌ ಅಹ್ಮದ್‌ ಶಾ ಸಾದತ್‌, ಈಗ ಜರ್ಮನಿಯಲ್ಲಿ ಮನೆಗೆಮನೆಗೆ ಸಿದ್ಧಾಹಾರ ಮಾರುತ್ತಿದ್ದಾರೆ! ಲೆಫೆರಾಂಡೊ ಸಂಸ್ಥೆಗಾಗಿ ಸೈಕಲ್‌ ತುಳಿದುಕೊಂಡು ಹೋಗಿ ಪಿಜ್ಝಾ ಮಾರುತ್ತಿರುವುದನ್ನು ಜರ್ಮನಿಯ ಒಬ್ಬ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ.

Advertisement

ಜರ್ಮನಿಯ ಲೀಪ್‌ಝಿಗ್‌ ಬೀದಿಯಲ್ಲಿ ಪಿಜಾl ಹಂಚಲು ಸೈಯದ್‌ ಸೈಕಲ್‌ ಹತ್ತಿ ಹೋಗುತ್ತಿದ್ದಾಗ; ಪತ್ರಕರ್ತ ಜೋಸಾ ಮೇನಿಯ ಚಿತ್ರಗಳನ್ನು ತೆಗೆದಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ದಾಗ, ನಾನು ಪಿಜ್ಝಾ ಮಾರುತ್ತಿದ್ದೇನೆ ಎಂದು ಸೈಯದ್‌ ಮಾರುತ್ತರಿಸಿದ್ದಾರೆ. ಇದು ಸಾಮಾ ಜಿಕ ತಾಣಗಳಲ್ಲಿ ವಿಪರೀತ ಓಡಾಡುತ್ತಿದೆ. ಈ ಚಿತ್ರಗಳು ತನ್ನವೇ ಎಂದು ಸೈಯದ್‌ ಖಚಿತಪಡಿಸಿದ್ದಾರೆ.

ಸೈಯದ್‌ 2018ರಲ್ಲಿ ಅಶ್ರಫ್ ಘನಿಯವರ ಸಂಪುಟ ಸೇರಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. 2020ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜರ್ಮನಿಗೆ ತಲುಪಿದ್ದರು. ಅವರು ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಸಂವಹನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next