ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚೇನಹಳ್ಳಿಯನ್ನುತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ್ದೇವೆ.ಆಡಳಿತ ವ್ಯವಸ್ಥೆಗೆ ಪೂರಕ ಸೌಲಭ್ಯ ಕಲ್ಪಿಸಲು ಕ್ರಮಕೈಗೊಂಡಿದ್ದೇವೆ. ಈ ಬಾರಿಗೆ ಗ್ರಾಪಂ ಚುನಾವಣೆಯಲ್ಲಿತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ಮುಂದಿನ 6 ತಿಂಗಳಅವಧಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಿ,ಹಕ್ಕುಪತ್ರ ವಿತರಿಸಿ, ಮನೆಗಳನ್ನು ನಿರ್ಮಿಸಿಕೊಡುತ್ತೇವೆಎಂದು ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ಮಂಚೇನಹಳ್ಳಿ ಗ್ರಾಪಂ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ . ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡುತ್ತೇವೆ ಎಂಬ ವಾಗ್ಧಾನ ಈಡೇರಿಸಿದ್ದೇವೆ. ಈ ಭಾಗದ ಜನರಿಗೆ ಶುದ್ಧ ನೀರು ಪೂರೈಕೆಗೆ ಯೋಜನೆರೂಪಿಸಿದ್ದು, ಕೊಳಾಯಿಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದರು.
ಉತ್ತಮ ಆಸ್ಪತ್ರೆ ನಿರ್ಮಾಣ: ಮಂಚೇನಹಳ್ಳಿಯಲ್ಲಿಉತ್ತಮ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. 15 ಕೋಟಿರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಮಾಡಿದ್ದೇವೆ. ಅಭಿವೃದ್ಧಿ ಕೆಲಸಗಳು ಯಾರು ಮಾಡಿದ್ದಾರೆಎಂದು ಗಮನದಲ್ಲಿಟ್ಟುಕೊಂಡು ಮತ ನೀಡಬೇಕು.ಸುಸಜ್ಜಿತ ಸರ್ಕಾರಿ ಪ್ರೌಢಶಾಲಾ ಕಟ್ಟಡ ನಿರ್ಮಿಸಿದ್ದೇವೆ. ಕೊಟ್ಟ ಮಾತಿನಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸಿದ್ದೇವೆ ಎಂದರು.
ಅಂತಿಮ ಘಳಿಗೆವರೆಗೆ ಹೋರಾಡಿ: ಚುನಾವಣೆಯಲ್ಲಿ ಅಂತಿಮ ಘಳಿಗೆವರೆಗೆ ಹೋರಾಟ ಮುಂದುವರಿಸಬೇಕು. ಚುನಾವಣೆಯಲ್ಲಿ ಗೆದ್ದಿದೇವೆ ಎಂಬ ಅತಿ ವಿಶ್ವಾಸಹೊಂದಬಾರದು. ಚುನಾವಣೆ ವ್ಯವಸ್ಥೆಯಲ್ಲಿ ಗ್ರಾಪಂ ಅಡಿಪಾಯವಾಗಿದ್ದು, ಮೊದಲು ಅಡಿಪಾಯ ಗಟ್ಟಿಗೊಳಿಸಿದಾಗ ಮಾತ್ರ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸಬಹುದು. ಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ಅಭ್ಯರ್ಥಿಗಳನ್ನು ಗೆಲ್ಲಿಸಿ, ಗ್ರಾಪಂ ಆಡಳಿತ ವ್ಯವಸ್ಥೆಯನ್ನು ಮಾದರಿಯಾಗಿ ಪರಿವರ್ತಿಸಲುಸಹಕರಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
ರೈತರ ಪ್ರಗತಿಗೆ ಏನು ಮಾಡಿದ್ದಾರೆ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಜೆಡಿಎಸ್ ಪಕ್ಷ ರೈತರು ಮತ್ತು ಸಾಮಾನ್ಯರಿಗಾಗಿ ಯಾವುದೇ ಯೋಜನೆ, ಕಾರ್ಯಕ್ರಮ ರೂಪಿಸಿಲ್ಲ. ರೈತರ ಹೆಸರಿನಲ್ಲಿ ಪ್ರಧಾನಿಯಾಗಿ, ರಾಜ್ಯದ ಸಿಎಂ ಆಗಿ ರೈತರ ಪ್ರಗತಿಗೆಏನು ಮಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಪಿಎಂದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಹಲವು ವರ್ಷ ಆಡಳಿತ ನಡೆಸಿದರು.
ರೈತರ ಪ್ರಗತಿಗೆ ಏನು ಮಾಡಿಲ್ಲ. ಆದರೆ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ನೇತೃತ Ìದ ಬಿಜೆಪಿ ಸರ್ಕಾರ ರೈತರ ಖಾತೆಗಳಿಗೆ ವಾರ್ಷಿಕವಾಗಿ ನೇರವಾಗಿ10 ಸಾವಿರ ರೂ.ಗಳನ್ನು ಮಾಡುತ್ತಿದೆ. ಉಜ್ವಲಯೋಜನೆ ಮೂಲಕ ಅಡುಗೆ ಅನಿಲ ಪೂರೈಸಿದೆ ªàವೆ.118 ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ 4.5 ಕೋಟಿ ರೂ. ಗಳ ಬಡ್ಡಿರಹಿತ ಸಾಲ ನೀಡಿದ್ದೇವೆ ಎಂದರು.