Advertisement

ಡೇಟಾ ರಕ್ಷಣೆಗೆ ಸಮಿತಿ ರಚನೆ: ಸುಪ್ರೀಂಗೆ ಕೇಂದ್ರ

07:25 AM Sep 07, 2017 | Harsha Rao |

ನವದೆಹಲಿ: ವಾಟ್ಸ್‌ಆ್ಯಪ್‌ ಮಾಹಿತಿ ಹಂಚಿಕೆ ಸಂಬಂಧ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿದೆ. ವಾಟ್ಸ್‌ ಆ್ಯಪ್‌ನ ಮಾಹಿತಿ ಹಂಚಿಕೆ ಸಂಬಂಧ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಐದು ನ್ಯಾಯಮೂರ್ತಿ ಗಳನ್ನೊಳಗೊಂಡ ಸಂವಿಧಾನ ಪೀಠಕ್ಕೆ ಸರ್ಕಾರ ಅರಿಕೆ ಮಾಡಿಕೊಂಡಿದ್ದು, ಈ ಸಮಿತಿ ವರದಿ ನೀಡಿದ ಮೇಲೆ ಕಾನೂನು ಜಾರಿಗೆ ತರುತ್ತೇವೆ ಎಂದು ಹೇಳಿದೆ. 

Advertisement

ಮುಖ್ಯ ನ್ಯಾ.ದೀಪಕ್‌ ಮಿಶ್ರಾ ನೇತೃತ್ವದಲ್ಲಿ ಮಾಹಿತಿ ರಕ್ಷಣೆ ಸಂಬಂಧ ವಿಚಾರಣೆ ನಡೆಯುತ್ತಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಗ್ರಾಹಕರ ಮಾಹಿತಿಯನ್ನು ಪರಸ್ಪರ ಹಂಚಕೆ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇದರಿಂದ ಜನರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎಂಬುದು ಅರ್ಜಿದಾರರ ಅಳಲು. ಹೀಗಾಗಿ ಸಂವಿಧಾನ ಪೀಠ ಈ ಬಗ್ಗೆ ವಿಚಾರಣೆ ನಡೆಸಿದ್ದು, ಜನರ ಖಾಸಗಿತನ  ರಕ್ಷಣೆಗೆ ಕೇಂದ್ರ ಯಾವ ಕ್ರಮ ತೆಗೆದುಕೊಂಡಿದೆ ಎಂಬ ಬಗ್ಗೆ ಕೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next