ನವದೆಹಲಿ: ಬಹುತೇಕ ಎಲ್ಲರ ಬಳಿ ಇಂದು ಗೂಗಲ್ ಪೇ, ಫೋನ್ ಪೇ ಇದ್ದೇ ಇದೆ. ಯಾವಾಗ ಬೇಕೋ ಆವಾಗ ಹಣವನ್ನು ಒಂದೆರಡು ಕ್ಲಿಕ್ ಮೂಲಕ ವರ್ಗಾವಣೆ ಮಾಡಬಹುದು. ರೀಚಾರ್ಜ್, ವಾಟರ್ ಬಿಲ್, ಗ್ಯಾಸ್ ಆರ್ಡರ್ ಮುಂತಾದವನ್ನು ಮಾಡಬಹುದು.
ಕೆಲವೊಮ್ಮೆ ನಮಗೆ ಅರ್ಜೆಂಟ್ ಆಗಿ ಹಣ ಬೇಕಾಗುತ್ತದೆ. ಆದರೆ ನಾವು ಎಟಿಎಂ ಕಾರ್ಡ್ ನ್ನು ಮರೆತು ಬರುತ್ತೇವೆ. ಅಥವಾ ಎಟಿಎಂ ಕಾರ್ಡ್ ಆ ಸಮಯದಲ್ಲಿ ಕೆಲಸ ಮಾಡುವುದಿಲ್ಲವಾದರೆ ಹಣ ನಿಮಗೆ ಬೇಕಾಗಿದ್ದರೆ ನಿಮ್ಮ ಯುಪಿಐ ನಂಬರ್ ಬಳಿಸಿಕೊಂಡೇ ಎಟಿಎಂನಿಂದ ಹಣ ತೆಗೆಯಬಹುದು ಎನ್ನುವುದು ನಿಮಗೆ ಗೊತ್ತಾ ?
ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ವಿತ್ ಡ್ರಾವಲ್ (Interoperable Cardless Cash Withdrawal) ವ್ಯವಸ್ಥೆಯಿಂದ ಎಟಿಎಂ ಕಾರ್ಡ್ ಇಲ್ಲದೆಯೇ ಯುಪಿಐ ನಂಬರ್ ಬಳಸಿ ಎಟಿಎಂ ಕೇಂದ್ರದಿಂದ ಹಣ ತೆಗೆಯಬಹುದು. ಆರ್ ಬಿಐ ಈಗಾಗಲೇ ಕ್ಲೋನಿಂಗ್ (ನಕಲಿ ಕಾರ್ಡ್ ಮಾಡಿ ಹಣ ತೆಗೆಯುವುದು) ಸ್ಕಿಮ್ಮಿಂಗ್ ಮತ್ತು ಡಿವೈಸ್ ಟ್ಯಾಂಪರಿಂಗ್ ನಂತಹ ಅಪರಾಧ ಕೃತ್ಯವನ್ನು ತಡೆಯಲು ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ವಿತ್ ಡ್ರಾವಲ್ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಪ್ರಮುಖ ಬ್ಯಾಂಕ್ ಗಳಿಗೆ ಹೇಳಿದೆ.
ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ನಿಂದ ಯುಪಿಐ ನಂಬರ್ ಹಣ ತೆಗೆಯುವುದು ಹೇಗೆ? :
Related Articles
ಸ್ಟೆಪ್ 1 : ಯಾವುದೇ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ, ಎಟಿಎಂ ಸ್ಕ್ರೀನ್ ಮೇಲೆ ವಿತ್ ಡ್ರಾ ಕ್ಯಾಶ್ ಆಯ್ಕೆಯನ್ನು ಒತ್ತಿ
ಸ್ಟೆಪ್ 2 : ಬಳಿಕ ಯುಪಿಐ ಆಯ್ಕೆಯನ್ನು ಒತ್ತಿ
ಸ್ಟೆಪ್ 3 : ಆಗ ಕ್ಯೂ ಆರ್ ಕೋಡ್ ಸ್ಕ್ರೀನ್ ಮೇಲೆ ಬರುತ್ತದೆ.
ಸ್ಪೆಪ್ 4: ಇದಾದ ಬಳಿಕ ನಿಮ್ಮ ಮೊಬೈಲ್ ನಲ್ಲಿ ಯುಪಿಐ ಆ್ಯಪ್ ಓಪನ್ ಮಾಡಿ ಸ್ಕ್ರೀನ್ ಮೇಲೆ ಬರುವ ಕ್ಯೂ ಆರ್ ಕೋಡ್ ಗೆ ಸ್ಕ್ಯಾನ್ ಮಾಡಿ
ಸ್ಟೆಪ್ 5 : ನಿಮಗೆ ಎಷ್ಟು ಹಣ ತೆಗೆಯಲು ಇದೆ ಅದನ್ನು ನಮೂದಿಸಿ
ಸ್ಟೆಪ್ 6 : ಯುಪಿಐ ಪಿನ್ ಹಾಕಿ, ಆ ಬಳಿಕ ಮುಂದುವರೆಯಿರಿ ( ʼHit Proceed’) ಬಟನ್ ಒತ್ತಿ
ಸ್ಟೆಪ್ 7 : ನಿಮ್ಮ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ವ್ಯವಸ್ಥೆಯನ್ನು ಬಳಸಲು ಯಾವುದೇ ಹೆಚ್ಚುವರಿ ಶುಲ್ಕ ಬ್ಯಾಂಕ್ ನಿಂದ ಕಡಿತವಾಗುವುದಿಲ್ಲ