Advertisement
ಜೀವನದಲ್ಲಿ ಹೊಸತನ್ನು ಕಂಡು ಸಂಭ್ರಮಿಸುವುದಕ್ಕಿಂತ ಹಳೆಯದನ್ನು ನೆನೆದು ನೊಂದುಕೊಳ್ಳುವುದೇ ಹೆಚ್ಚು. ಪ್ರತಿಯೊಬ್ಬರ ಬದುಕಿನಲ್ಲಿ ನಾಳೆ ಎನ್ನುವ ಆಶಾವಾದ, ನಿನ್ನೆ ಎನ್ನುವ ಹತಾಶ ಭಾವ ಇದ್ದೇ ಇರುತ್ತದೆ. ಆದರೆ ಇಂದು ನಾವು ಮಾತನ್ನು ಪೂರ್ತಿಯಾಗಿ ತಲೆ ಕೆಳಗಾಗಿ ಮಾಡಿ ಬಿಟ್ಟಿದ್ದೇವೆ. ನಾಳೆಯನ್ನು ಆಶಯವಾಗಿ ಕಾಣುವ ಬದಲು, ಏನೋ ಆಗಬಹುದು, ಕೆಟ್ಟ ಘಳಿಗೆ ಬರಬಹುದು ಎನ್ನುವ ಹತಾಶ ಭಾವವನ್ನು ನಂಬಿಕೊಂಡು ಇರುವ ಮನಸ್ಥಿತಿ.
ಬದುಕು ಎಲ್ಲವನ್ನೂ ಕಲಿಸುತ್ತದೆ. ಎಲ್ಲ ಪರಿಸ್ಥಿತಿಯಲ್ಲೂ ನಮ್ಮನ್ನು ಅಲೆಯುವಂತೆ ಮಾಡುತ್ತದೆ. ಒಂದೇ ದಿನ ಸಾವಿರಾರು ಮಂದಿಯ ಹುಟ್ಟು, ನೂರಾರು ಮಂದಿಯ ಸಾವು, ಹೀಗೆ ಪ್ರತಿನಿತ್ಯ ಜಗತ್ತಿನಲ್ಲಿ ಸಾಗುವ ದೃಶ್ಯ ಒಂದು ದಿನ ಅಥವಾ ಕ್ಷಣಕ್ಕೆ ನನ್ನಲ್ಲೂ ಬರಬಹುದು. ನಾನೊಬ್ಬ ತಮ್ಮ, ಅಣ್ಣ, ಗಂಡ. ಅಂಕಲ್, ಅಜ್ಜ ಹೀಗೆ ಎಲ್ಲ ಪಾತ್ರಗಳಲ್ಲಿ ಅನಿವಾರ್ಯವಾಗಿ ಒಗ್ಗಿಕೊಳ್ಳಲೇಬೇಕು. ಆಯಾ ಪಾತ್ರಗಳಿಗೆ ಜನ ಮನ್ನಣೆಯನ್ನು ನೀಡಬೇಕು ಎನ್ನುವ ಭ್ರಮೆಯಲ್ಲಿ ನಾವು ಇರಬಾರದು ಅಷ್ಟೇ. ದೇವರಲ್ಲಿ ನಾವು ಎಷ್ಟೇ ಅಂತಸ್ತು, ಆಸ್ತಿಯನ್ನು ಬೇಡಿಕೊಂಡರೂ, ದೇವರು ಖುಷಿ ಹಾಗೂ ದುಃಖ ಗಳ ನಕ್ಷತ್ರಗಳನ್ನು ಇಟ್ಟುಕೊಂಡ ಮಾಯಾವಿ. ಆತನ ಕೈಯಿಂದ ಬರುವ ಆಸೆ, ನಿರಾಶೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಭಕ್ತರು ನಾವು ಆಗಬೇಕು ವಿನಾ ಸಂತೋಷದ ಸರಮಾಲೆಯನ್ನು ಧರಿಸಿಬಿಡು ದೈವ ಎಂದು ಕೇಳುವ ಸ್ವಾರ್ಥಿಗಳು ನಾವು ಆಗಬಾರದು.
Related Articles
Advertisement
ಕಣ್ಣೀರಿನ ತೂಕಇಂಥದ್ದು ಪ್ರತಿನಿತ್ಯ ನಮ್ಮಲ್ಲಿ ನಡೆಯುತ್ತಾ ಇರುತ್ತದೆ. ನಮ್ಮ ಸುತ್ತ ಮುತ್ತ. ಆದರೆ ನಮ್ಮ ಕಣ್ಣಿಗೆ ಬೀಳುವುದು ಉತ್ತುಂಗಕ್ಕೇರಿ ಪಾತಾಳಕ್ಕೆ ಬೀಳುವ ಶ್ರೀಮಂತರು ಮಾತ್ರ. ಸಾವು ಎಷ್ಟು ವಿಚಿತ್ರ ನೋಡಿ, ದುಃಖಗಳಿದ್ರೂ ಅವುಗಳಿಗೂ ಕಣ್ಣೀರಿನ ತೂಕವನ್ನು ನೀಡುತ್ತದೆ. ಸೋಲಿನ ಬೇಲಿ, ಗೆಲುವಿನ ಗಡಿಯನ್ನು ದಾಟುವ ಪ್ರಯತ್ನ ನಮ್ಮದಾಗ ಬೇಕು. ಚಪ್ಪಾಳೆ ತಟ್ಟಲು ಬರುವ ಕೈಗಳು, ದೂರ ಸರಿಯಲು ಇರುವ ಕಾಲುಗಳು ಎರಡೂ ನಮ್ಮ ಅಕ್ಕ ಪಕ್ಕವೇ ಇರುತ್ತವೆ, ಸೋಲು, ಗೆಲುವು ಬಂದಾಗ ಅವು ಎದುರಿಗೆ ಬರುತ್ತವೆ ಅಷ್ಟೇ.
ನಾಳೆಯನ್ನು ಭರವಸೆಯಿಂದ ಸ್ವಾಗತಿಸುವ, ನಿರಾಸೆಯಿಂದಲ್ಲ. ನಾಲ್ಕು ದಿನದ ಬದುಕಿನ ಆಟದಲ್ಲಿ ಮುಖವಾಡ ತೊಟ್ಟು ಆಟ-ಪಾಠ ಕಲಿಯುವ ಬದಲು ದೇವರು ಸೃಷ್ಟಿಸಿರುವ ವಿಧಿಬರಹದಲ್ಲಿ ನಾವು ಬೇರೆ ಬೇರೆ ಬಣ್ಣಗಳನ್ನು ತೊಟ್ಟ ನಾಟಕಧಾರಿಗಳು ಮಾತ್ರ ಎನ್ನುವುದನ್ನು ಮರೆಯದಿರುವ. - ಸುಹಾನ್ ಶೇಕ್