Advertisement

ಭಾರತದೊಂದಿಗೆ ಕ್ರಿಕೆಟ್‌ ಆಡುವ ಆಸೆಬಿಡಿ: ಪಾಕ್‌ಗೆ ಮಿಯಾಂದಾದ್‌

06:40 AM Jan 06, 2018 | Team Udayavani |

ಕರಾಚಿ: ಭಾರತದೊಂದಿಗೆ ಕ್ರಿಕೆಟ್‌ ಆಡುವ ಆಸೆ ಬಿಡಿ, ಅದು ಮುಗಿದ ಅಧ್ಯಾಯ. ಅದರ ಬದಲು ಪಾಕಿಸ್ತಾನದಲ್ಲಿ ಕ್ರಿಕೆಟ್‌ ಅಭಿವೃದ್ಧಿಪಡಿಸಿ ಎಂದು ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಜಾವೆದ್‌ ಮಿಯಾಂದಾದ್‌ ಹೇಳಿದ್ದಾರೆ. 

Advertisement

ಭಾರತಕ್ಕೆ ನಮ್ಮೊಂದಿಗೆ ಕ್ರಿಕೆಟ್‌ ಆಡುವ ಆಸಕ್ತಿಯಿಲ್ಲ. ಕಳೆದ 10 ವರ್ಷದಿಂದ ಅದು ನಮ್ಮೊಂದಿಗೆ ದ್ವಿಪಕ್ಷೀಯ ಕ್ರಿಕೆಟ್‌ ಆಡಿಲ್ಲ. ಅವರೊಂದಿಗೆ ಆಡದಿದ್ದರೆ ಪಾಕಿಸ್ತಾನದಲ್ಲೇನು ಕ್ರಿಕೆಟ್‌ ನಾಶವಾಗುವುದಿಲ್ಲ ಎಂದು ಮಿಯಾಂದಾದ್‌ ಹೇಳಿದ್ದಾರೆ.

ಪಾಕ್‌ನಲ್ಲಿ 2009ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡೆಯುತ್ತಿಲ್ಲ. ಆದರೂ ಇಲ್ಲೇನು ಕ್ರಿಕೆಟ್‌ ನಾಶವಾಗಿಲ್ಲ. ಅದು ತನ್ನ ಪಾಡಿಗೆ ತಾನು ಉಳಿದೇ ಇದೆ. ಕಳೆದ ವರ್ಷ ಮಿನಿ ವಿಶ್ವಕಪ್‌ ಖ್ಯಾತಿಯ ಚಾಂಪಿಯನ್ಸ್‌ ಟ್ರೋಫಿ ಗೆದ್ದಿರುವುದೇ ಇದಕ್ಕೆ ಸಾಕ್ಷಿ ಎಂದು ಮಿಯಾಂದಾದ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next