Advertisement

ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ದಾಖಲೆ

10:20 AM Dec 15, 2019 | Sriram |

ಹೊಸದಿಲ್ಲಿ: ದೇಶದ ವಿದೇಶಿ ವಿನಿಮಯ ಮೀಸಲು ಇದೇ ಮೊದಲ ಬಾರಿಗೆ ದಾಖಲೆಯ ಸರ್ವಾಧಿಕ ಮೊತ್ತವನ್ನು ತಲುಪಿದೆ.

Advertisement

ನ.29ಕ್ಕೆ ಕೊನೆಗೊಂಡ ವಾರದಲ್ಲಿ 45.10 ದಶಲಕ್ಷ ಕೋಟಿ ಡಾಲರ್‌ಗಳಿಂದ 45.32 ಕೋಟಿ ಡಾಲರ್‌ಗಳಿಗೆ ವಿನಿಯಮ ಏರಿಕೆಯಾಗಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಒಟ್ಟಾಗಿ ಬಂಗಾರ ಮೀಸಲು, ವಿಶೇಷ ಹಕ್ಕುಗಳು, ಹಣವನ್ನು ಅಂ.ರಾ. ಹಣಕಾಸು ನಿಧಿಯಲ್ಲಿ ಹೊಂದಿದೆ.

ಇದೇ ವೇಳೆ ರಿಸರ್ವ್‌ ಬ್ಯಾಂಕ್‌ನ ವಾರದ ದತ್ತಾಂಶ ವರದಿ ಪ್ರಕಾರ ದೇಶದ ಚಿನ್ನ ಮೀಸಲು ಮೌಲ್ಯ 430 ಕೋಟಿ ಡಾಲರ್‌ಗೆ ತಲುಪಿದೆ. ಈ ಹಿಂದೆ ಇದು 270 ಕೋಟಿ ಡಾಲರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next