Advertisement
ಎರಡು ದಿನಗಳ ಪ್ರಾದೇಶಿಕ ಆಯು ಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯತ್ ಮುಖ್ಯಕಾರ್ಯನಿರ್ವಹಣಾ ಧಿಕಾರಿಗಳ ಸಮ್ಮೇಳನ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಹಾಗೂ ಕಂದಾಯ ಜಮೀನುಗಳನ್ನು ಗುರುತಿ ಸುವುದು ಸಾಕಷ್ಟು ಸಮಸ್ಯೆಯಾಗಿದ್ದು, ಎರಡೂ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಪ್ರತಿ ಜಿಲ್ಲೆಗಳಲ್ಲಿಯೂ ಟ್ಯಾಂಕರ್‌ನಲ್ಲಿ ನೀರು ಒದಗಿಸಲಾಗುತ್ತಿದೆ. ಟ್ಯಾಂಕರ್‌ಗಳಿಗೆ ಬಿಲ್ನೀಡಿಲ್ಲ ಎಂಬ ದೂರು ಬಂದಿತ್ತು. 15 ದಿನಗಳ ಒಳಗಾಗಿ ಅವರ ಬಾಕಿ ಪೂರ್ಣಗೊಳಿಸಿ ಎಂದು ಸೂಚಿಸಿದ್ದೇವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ಗ್ರಾಮಗಳಿಗೆ ಭೇಟಿ ಕೊಡಬೇಕು. ಬರ ಪರಿಹಾರ, ಅಲ್ಲಿನ ಕುಂದುಕೊರತೆ ಆಲಿಸಬೇಕು ಎಂದೂ ಸೂಚಿಸಿದ್ದೇವೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ 949 ಕೋಟಿ ರೂ. ಮುಂಗಾರು ಹಂಗಾಮಿಗೆ ಕೇಂದ್ರ ಮಂಜೂರು ಮಾಡಿದ್ದು, 650 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಬಾಕಿ ಹಣವನ್ನು ಕೆಲವೇ ದಿನದಲ್ಲಿ ರಾಜ್ಯ ಸರಕಾರ ಭರಿಸಲಿದೆ ಎಂದು ಹೇಳಿದರು.
ಹೋಬಳಿ ಮಟ್ಟದಲ್ಲಿ ಕಡ್ಡಾಯವಾಗಿ ಕಂದಾಯ ಹಾಗೂ ಪಿಂಚಣಿ ಅದಾಲತ್ ನಡೆಸಲು ಸೂಚನೆ ನೀಡಿದ್ದೇನೆ. ವಿಧವೆಯರು, ಹಿರಿಯರು ತಾಲೂಕು ಕಚೇರಿಗೆ ಬರುವುದನ್ನು ತಪ್ಪಿಸಿ, ಅಧಿಕಾರಿ ಗಳೇ ಅವರ ಮನೆಗೆ ತೆರಳಿ ಅವರಿಂದ ಸಂಬಂಧಪಟ್ಟ ದಾಖಲೆ ಪಡೆದು ಸರಕಾರದಿಂದ ನೀಡುವ ವೇತನವನ್ನು ನೀಡುವಂತೆ ಹೇಳಿದ್ದೇವೆ.
ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆ ತಡವಾಗುತ್ತಿದ್ದು, ತ್ವರಿತವಾಗಿ ವಿಲೇವಾರಿ ಆಗಬೇಕು. ಕೈಗಾರಿಕೆಗಳು ರಾಜ್ಯಕ್ಕೆ ಹೆಚ್ಚು ಬರುತ್ತಿವೆ. ಇವರಿಗೆ ಭೂಮಿ ನೀಡುವುದು ತಡವಾಗುತ್ತಿರುವು ದು ಗಮನಕ್ಕೆ ಬಂದಿದೆ. ಕೈಗಾರಿಕೆಗಳಿಗೆ ಭೂಮಿ ನೀಡಲು ಏಕಗವಾಕ್ಷಿಯ ಮೂಲಕ ಮಂಜೂರು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.