Advertisement

ಸಸಿ ನೆಟ್ಟು ಪೋಷಣೆ ಮಾಡದ ಅರಣ್ಯ ಇಲಾಖೆ

04:30 PM May 04, 2019 | Suhan S |

ಹುಳಿಯಾರು: ರಸ್ತೆ ಬದಿ ನೆಟ್ಟಿರುವ ಸಸಿಗಳನ್ನು ಅರಣ್ಯ ಇಲಾಖೆ ಸಂಪೂರ್ಣವಾಗಿ ಮರೆತಿದೆ. ಇಲ್ಲಿನ ಯಳನಾಡು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ವಿವಿಧ ಬಗೆಯ ಸಸಿಗಳು ಇನ್ನೂ ಬೆಳವಣಿಗೆ ಹಂತದ್ದು ನಿಷ್ಕಾಳಜಿಯ ಕಾರಣ ಬಿಸಿಲು ಮತ್ತು ದನಕರುಗಳ ದಾಳಿಗೆ ಒಳಗಾಗಿವೆ. ಹಸಿರೀಕರಣ ಯೋಜನೆ ಅರಣ್ಯ ಇಲಾಖೆಯ ಮಹತ್ವಾ ಕಾಂಕ್ಷಿ ಕಾರ್ಯಕ್ರಮ. ಈ ಯೋಜನೆಗೆ ಪೂರಕವಾಗಿ ಹುಳಿಯಾರಿನಿಂದ ಯಳನಾಡು ಗ್ರಾಮದವರೆಗೂ ನೆಡುತೋಪು ನಿರ್ಮಿಸಿತ್ತು. ಆದರೆ, ನಿರ್ವಹಣೆ ಇಲ್ಲದೇ ಹಾಕಿರುವ ಸಸಿಗಳು ಒಣಗುತ್ತಿದ್ದು, ಖರ್ಚು ಮಾಡಿರುವ ಹಣ ವ್ಯರ್ಥವಾಗಿದೆ.

Advertisement

ನಿರ್ಲಕ್ಷ್ಯ: ರಸ್ತೆ ಬದಿ ಸಸಿಗಳನ್ನು ನೆಟ್ಟು ಪೋಷಿಸಲು ಸರ್ಕಾರ ಉದ್ದೇಶಿಸಿ ನೌಕರರನ್ನು ನಿಯೋಜಿಸಿತ್ತು. ದಿನಗೂಲಿ ಸಿಬ್ಬಂದಿ, ಅಧಿಕಾರಿಗಳು ನಿಯೋಜಿಸಿ ರುವ ಜಾಗಗಳಲ್ಲಿ ಸಸಿ ನೆಟ್ಟು ಪೋಷಣೆ ಮಾಡ ಬೇಕು. ಆದರೆ ಈ ಕೆಲಸಕ್ಕೆ ನಿರ್ಲಕ್ಷ್ಯ ವಹಿಸಿದ್ದು ಯೋಜನೆ ಹಳ್ಳ ಹಿಡಿದಿದೆ.

ಟ್ಯಾಂಕರ್‌ ಮೂಲಕ ಸಸಿಗಳಿಗೆ ನೀರು ಹಾಕದೆ ನಿರ್ಲಕ್ಷ್ಯಿಸಿರುವುದರಿಂದ ಬೇಸಿಗೆ ಬಿಸಿಲಿನ ಝಳಕ್ಕೆ ಹಲವು ಸಸಿಗಳು ಸಂಪೂರ್ಣ ಒಣಗಿ ನಿಂತಿವೆ. ತಡೆಬೇಲಿ ಕಿತ್ತುಹೋಗಿವೆ. ಕೆಲ ಕಡೆ ಬೀಡಾಡಿ ದನಗಳಿಂದ ಸಸಿಗಳು ಅರ್ಧಕ್ಕೆ ಮುರಿದಿವೆ. ಅತ್ತ ದಾರಿ ಹೋಕರಿಗೆ ನೆರಳಿನ ಕೊಡೆಯಂತಿ ರುತ್ತಿದ್ದ ರಸ್ತೆ ಬದಿ ಸಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿ ಸುತ್ತಿದೆ. ಇತ್ತ ಮರ ಸಸಿಗಳ ರಕ್ಷಣೆ ಮತ್ತು ಪೋಷಣೆ ಹೊಣೆ ಹೊತ್ತ ಅರಣ್ಯ ಇಲಾಖೆ ಮಾತ್ರ ನೆಟ್ಟ ಸಸಿಗಳ ಬಗ್ಗೆ ಮುತುವರ್ಜಿ ವಹಿಸದೆ ಒಣಗಲು ಬಿಟ್ಟು ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಯೋಜನೆ ತಲುಪಿಸಿ: ಅರಣ್ಯ ಇಲಾಖೆ ಜವಾಬ್ದಾರಿ ಯುತವಾಗಿ ಕೆಲಸ ಮಾಡಲು ಮುಂದಾಗಬೇಕಿದೆ. ನೆಡು ತೋಪು ನಿರ್ವಹಣೆ ಹೊಣೆ ಹೊತ್ತ ಸಿಬ್ಬಂದಿಗೆ ತಕ್ಷಣ ಟ್ಯಾಂಕರ್‌ ಮೂಲಕ ನೀರು ಹಾಕುವಂ ತೆಯೂ, ಕಿತ್ತು ಹೋಗಿರುವ ಬೇಲಿ ಸರಿಪಡಿಸು ವಂತೆಯೂ ನಿರ್ದೇಶನ ನೀಡಬೇಕಿದೆ. ಹುಳಿಯಾರಿನ ಪರಿಸರ ಪ್ರೇಮಿ ರಾಜುಬಡಗಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ನೆಪದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆದಿದೆ. ಕಳೆದ 2-3 ತಿಂಗಳ ಹಿಂದಷ್ಟೇ ಹುಳಿಯಾರು ಪಟ್ಟಣದ ನೂರಾರು ವರ್ಷ ಹಳೆಯ ಹೆಮ್ಮರಗಳನ್ನು ಧರೆಗುರುಳಿಸಿದ್ದರು. ಆದರೆ ಬೆಳಸುವ ಕಾರ್ಯ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಸಸಿ ಬೆಳೆಸ ಲೆಂದೇ ಸರ್ಕಾರ ಹಣ ಕೊಟ್ಟರೂ ಪ್ರಯೋಜನ ವಾಗುತ್ತಿಲ್ಲ. ಹಾಗಾಗಿಯೇ ಈ ಭಾಗ ನಿರಂತರ ಬರಲಾಗಕ್ಕೆ ತುತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.

.ಎಚ್.ಬಿ.ಕಿರಣ್‌ ಕುಮಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next