Advertisement

ಅಕ್ರಮವಾಗಿ ರಕ್ತ ಚಂದನ ತುಂಡುಗಳ ಸಾಗಾಟ; ಆರೋಪಿಗಳನ್ನು ಬಂಧಿಸಿದ ಅರಣ್ಯ ಸಿಬಂದಿ

08:32 PM Oct 22, 2020 | mahesh |

ಚಿಕ್ಕಬಳ್ಳಾಪುರ : ಆಂಧ್ರ ಪ್ರದೇಶದಿಂದ ಅಕ್ರಮವಾಗಿ ರಕ್ತ ಚಂದನದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ವಾಹನ ಉರುಳಿ ಒಬ್ಬ ಕಾಲು ಮುರಿದುಕೊಂಡು ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ದೊಡ್ಡಪೈಲಗುರ್ಕಿ ಸಮೀಪ ಸಂಭವಿಸಿದೆ.

Advertisement

ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಚರಣೆಯಿಂದ ಭಯ ಭೀತಗೊಂಡು ವಾಹನ ಹಳ್ಳಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಆಂದ್ರಪ್ರದೇಶದ ಕಡಪ ಜಿಲ್ಲೆಯ ಮುದ್ದಿರೆಡ್ಡಿ ನಾಯಕ್ ಎಂಬಾತನಿಗೆ ಕಾಲಿಗೆ ಪೆಟ್ಟು ಬಿದ್ದಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಮತ್ತೊಬ್ಬ ಆರೋಪಿ ಕೋಲಾರ ಜಿಲ್ಲೆಯ ಕಟ್ಟಿಕೇನಹಳ್ಳಿಯ ಬೇಗ್ ಉರುಫ್ ಬಾಷ ಎಂಬಾತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯೊಂದಿಗೆ ಡಿ.ಎಫ್.ಓ ಅರ್ಸಲನ್ ಅವರ ಮಾರ್ಗದರ್ಶನದಲ್ಲಿ ಆರ್‍ಎಫ್‍ಓ ತನ್ವೀರ್ ಅಹಮದ್ ಮತ್ತು ಸಿಬ್ಬಂದಿ ವೆಂಕಟೇಶ್, ಅವಿನಾಶ್ ಒಳಗೊಂಡ ತಂಡ ಚಿಕ್ಕಬಳ್ಳಾಪುರದ ವಾಪಸಂದ್ರದ ಬಳಿ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಅದನ್ನು ಲೆಕ್ಕಿಸದೇ ಮುಂದೆ ಸಾಗಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಕಾರ್ಪಿಯೊ ವಾಹನವನ್ನು ಹಿಂಬಾಲಿಸಿದ್ದಾರೆ ಈ ವೇಳೆಯಲ್ಲಿ ಆರೋಪಿಗಳ ವಾಹನ ಹಳ್ಳದಲ್ಲಿ ಉರುಳಿ ಬಿದ್ದಿದೆ ಇದರಿಂದ ಒಬ್ಬನ ಕಾಲು ಗಾಯಗೊಂಡಿದೆ ಮತ್ತೊಬ್ಬ ಪಾರಾಗಿದ್ದಾನೆ.

ನಂಬರ್ ಪ್ಲೇಟ್‍ಗಳ ಬದಲಾವಣೆ: ಆಂಧ್ರದಿಂದ ಅಕ್ರಮವಾಗಿ ರಕ್ತ ಚಂದವನ್ನು ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದಿರುವ ಆರೋಪಿಗಳ ವಾಹನದಲ್ಲಿ ಆಂಧ್ರಪ್ರದೇಶದ ಸಂಖ್ಯೆಗಳನ್ನು ಹೊಂದಿರುವ ನಂಬರ್ ಪ್ಲೇಟ್‍ಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಕರ್ನಾಟಕದಲ್ಲಿ ಮತ್ತು ಆಂಧ್ರದಲ್ಲಿ ಪ್ರತ್ಯೇಕ ನಂಬರ್ ಪ್ಲೇಟ್‍ಗಳನ್ನು ಬಳಸಿ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next