Advertisement

ಅರಣ್ಯ ರಕ್ಷಣೆ ಪ್ರತಿಯೊಬ್ಬರ ಹೊಣೆ

09:56 AM Mar 05, 2019 | Team Udayavani |

ಎನ್‌.ಆರ್‌.ಪುರ: ಕಾಡಿಗೆ ಬೆಂಕಿ ಬಿದ್ದರೆ ತಕ್ಷಣ ಅದನ್ನು ನಂದಿಸಲು ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಸಹ ಕೈಜೋಡಿಸಬೇಕು ಎಂದು ಕೊಪ್ಪ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ಹೇಳಿದರು. ಅವರು ಬಿ.ಎಚ್‌.ಕೈಮರದಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಕಾಡಿನ ಬೆಂಕಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಸಾಗರ ತಾಲೂಕಿನ ಆನಂದಪುರದ ಜಾನಪದ ಕಲಾವಿದರಾದ ಗುಡ್ಡಪ್ಪ ಮತ್ತು ತಂಡವರು ನಡೆಸಿದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. 

Advertisement

ಅರಣ್ಯ,ಪರಿಸರ ಎಲ್ಲವೂ ಗ್ರಾಮಸ್ಥರಿಗೆ ಸೇರಿದೆ. ಅರಣ್ಯದಲ್ಲಿರುವವರೆಗೂ, ಕಟ್ಟಿಗೆಯನ್ನು ನೀವೇ ಉಪಯೋಗಿಸಿಕೊಳ್ಳಿ. ಅರಣ್ಯ ಸಂರಕ್ಷಣೆ ನಿಮ್ಮ ಹೊಣೆಯಾಗಿದೆ. ಸಂವಿಧಾನವು ನಮಗೆ ಕೆಲವು ಹಕ್ಕನ್ನು ಕೊಟ್ಟಿದೆ.ಅ ದರಲ್ಲಿ ಅರಣ್ಯ ಸಂರಕ್ಷಣೆಯೂ ಸೇರಿದೆ. ನಿಮ್ಮ ಅರಣ್ಯವನ್ನು ನೀವೇ ಸಂರಕ್ಷಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಸಂಪದ್ಬರಿತ ಅರಣ್ಯ, ಪರಿಸರವನ್ನು ಹಸ್ತಾಂತರಿ ಸಬೇಕಾಗಿರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ರಂಗನಾಥ್‌, ಉಪವಲಯ ಅರಣ್ಯಾಧಿಕಾರಿಗಳಾದ ಗೌಸ್‌ ಮಹಿದ್ದೀನ್‌, ಎಸ್‌.ರಘು, ಮನೋಹರ ನಾಯಕ್‌, ಈಚಿಕೆರೆ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣನಾಯಕ್‌, ಸಹ ಶಿಕ್ಷಕರು, ನರಸಿಂಹರಾಜಪುರ ಹಾಗೂ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು

ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಪ್ರಾಣಿ, ಪಕ್ಷಿಗಳು ನಾಶವಾಗಿದೆ. ಕಾಡಿಗೆ ಪ್ರಾಣಿಗಳೇ ಆಭರಣಗಳಾಗಿವೆ. ಮುಂದೆ ಕಾಡಿಗೆ ಬೆಂಕಿ ಬೀಳದಂತೆ ಎಚ್ಚರ ವಹಿಸಬೇಕಾಗಿದೆ  ಲೋಕೇಶ್‌, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next