ಮಾನ್ವಿ: ಕಳೆದ ಆರು ದಿನಗಳಿಂದ ಅರಣ್ಯ ಧಿಕಾರಿಗಳ ಹಾಗೂ ವಿಶೇಷ ವನ್ಯಜೀವಿ ತಜ್ಞರ ತಂಡದಿಂದ ಶೋಧ ಕಾರ್ಯ ಮುಂದುವರೆದಿದ್ದು, ಸದ್ಯ ಗುಡ್ಡದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ವಲಯ ಅರಣ್ಯ ಧಿಕಾರಿ ರಾಜೇಶ ನಾಯಕ ತಿಳಿಸಿದರು.
ತಾಲೂಕಿನ ನೀರಮಾನ್ವಿ ಮಾರೆಮ್ಮ ಗುಡಿ ಗುಡ್ಡದ ಹತ್ತಿರದಲ್ಲಿ ಮತ್ತು ಬೆಟ್ಟದೂರು ಗ್ರಾಮದ ಹತ್ತಿರ ಇರುವ ಗುಡ್ಡದಲ್ಲಿ ಚಿರತೆಗಳು ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಗುಡ್ಡಗಳಲ್ಲಿ ಚಿರತೆಗಳ ಓಡಾಟದ ಬಗ್ಗೆ ಪರಿಶೀಲನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ, ವನ್ಯಜೀವಿ ತಜ್ಞರು ಹಾಗೂ ಸ್ಥಳೀಯರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಗುಡ್ಡದಲ್ಲಿನ ಪ್ರತಿಯೊಂದು ಗುಹೆಗಳನ್ನು ಹಾಗೂ ಚಿರತೆಗಳು ಮಂಗ, ಮೋಲ, ಮುಳ್ಳು ಹಂದಿಗಳನ್ನು ಬೇಟೆಯಾಡಿ ತಿಂದಿರುವ ಬಗ್ಗೆ ಮಾಹಿತಿ ಹಾಗೂ ಅವುಗಳು ವಿಸರ್ಜಿಸಿರುವ ಮಲ ಹಾಗೂ ಹೆಜ್ಜೆ ಗುರುತುಗಳನ್ನು ಪರಿಶೀಲಿಸಲಾಗುತ್ತಿದೆ.
ಹೆಚ್ಚುವರಿ ಇನ್ನೊಂದು ಬೋನ್ ಇಡುವಂತೆ ಸೂಚಿಸಿದ್ದರಿಂದ ಎರಡನೇ ಬೋನ್ ಇಡಲಾಗಿದೆ. ಒಟ್ಟು ಎರಡು ಬೋನ್‌ಗಳನ್ನು ಇಟ್ಟು ಆಯಕಟ್ಟಿನ ಜಾಗದಲ್ಲಿ ನೈಟ್‌ವಿಜನ್ ಹಾಗೂ ಈ ಪ್ರದೇಶದಲ್ಲಿ ಹಾದು ಹೋಗುವ ಪ್ರಾಣಿಗಳನ್ನು ಸೆನ್ಸಾರ್ ಮೂಲಕ ಸೇರೆ ಹಿಡಿಯುವ ಟ್ರಾÂಪಿಂಗ್ ಕ್ಯಾಮರಾಗಳನ್ನು ಅಳವಡಿಸಿ ಚಿರತೆಗಳ ಚಲನವಲನ ಪರಿಶೀಲಿಸಲಾಗುತ್ತಿದೆ.
ಚಿರತೆಗಳು ತುಂಬ ಸೂಕ್ಷವಾದ ಪ್ರಾಣಿಗಳಾಗಿದ್ದು, ತುಂಬ ಸಂಕುಚಿತವಾಗಿರುತ್ತವೆ. ಸ್ವಲ್ಪ ಶಬ್ದವಾದರು ಅವುಗಳು ಗುಡ್ಡದಲ್ಲಿನ ಪೊದೆ, ಗುಹೆಗಳಿಂದ ಹೊರಬರುವುದಿಲ್ಲ. ಗುಡ್ಡ ಪ್ರದೇಶಕ್ಕೆ ಜನರ ಸಂಚಾರ ಅ ಧಿಕವಾಗಿರುವುದರಿಂದ ಅವುಗಳು ಕಾಣಿಸಿಕೊಳ್ಳುತ್ತಿಲ್ಲ ಹಾಗೂ ಅವುಗಳು ತಮ್ಮ ವಾಸಸ್ಥಾನ ಬದಲಿಸುವ ಸಾಧ್ಯತೆ ಇರುವುದರಿಂದ ಜನರು ಸಹಕರಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಾದಂತಿ ನಂಬದಿರುವಂತೆ ತಿಳಿಸಿದರು. ಪರಿಸರ ಪ್ರೇಮಿ ಸಲ್ಲಾವುದ್ದೀನ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.