Advertisement

ಜಿಂಕೆ ಬೇಟೆಗಾರನ ಬಂಧನ: 20 ಕೆ.ಜಿ ಮಾಂಸ ಮತ್ತು 1 ನಾಡಬಂದೂಕು ವಶ

07:56 PM Sep 23, 2020 | Hari Prasad |

ಹನೂರು (ಚಾಮರಾಜನಗರ): ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಜಿಂಕೆಯೊಂದನ್ನು ಬೇಟೆಯಾಡಿದ್ದ ಬೇಟೆಗಾರನನನ್ನು ಬಂಧಿಸಲಾಗಿದೆ.

Advertisement

ಆರೋಪಿಯಿಂದ 20 ಕೆ.ಜಿ ಜಿಂಕೆ ಮಾಂಸ ಮತ್ತು ಒಂದು ನಾಡ ಬಂದೂಕನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕಿನ ಕಾಂಚಳ್ಳಿ ಗ್ರಾಮದ ಮುರುಗೇಗೌಡ (45) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಮಲೆ ಮಹದೇಶ್ವರ ವನ್ಯಜೀವಿ ವಲಯದ ಹನೂರು ಬಫರ್ ಅರಣ್ಯ ಪ್ರದೇಶದ ಪಚ್ಚೆದೊಡ್ಡಿಯ ಸಿಪಿಟಿ 104ರ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದನು.

ಬುಧವಾರ ಬೆಳಗ್ಗಿನ ಜಾವ 4 ಗಮಟೆ ಸಮಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಇಲಾಖಾ ಅಧಿಕಾರಿಗಳು ಈತನನ್ನು ಗಮನಿಸಿದ್ದು ಕೂಡಲೇ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಈತನ ಜೊತೆಗಿದ್ದ ಕಾಂಚಳ್ಳಿ ಗ್ರಾಮದ ಪೆರುಮಾಳ ಶೆಟ್ಟಿ, ಮಾದೇಶ, ಮುತ್ತೇಗೌಡ ಮತ್ತು ಗೋವಿಂದೇಗೌಡ ಪರಾರಿಯಾಗಿದ್ದಾರೆ.

Advertisement

ಈ ಸಂಬಂಧ ಅರಣ್ಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿತನಿಂದ 20 ಕೆ.ಜಿಯಷ್ಟು ಜಿಂಕೆ ಮಾಂಸ, ಒಂದು ನಾಡಬಂದೂಕು, ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಇನ್ನೂ 4 ಜನ ಆರೋಪಿಗಳ ಪತ್ತೆಗಾಗಿ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಎಫ್‍ಓ ಏಡುಕುಂಡಲು ಮತ್ತು ಎಸಿಎಫ್ ವನಿತಾ ಅವರ ಮಾರ್ಗದರ್ಶನದಲ್ಲಿ ಪರೀಕ್ಷಾರ್ಥ ಎಸಿಎಫ್ ವಿರೇಶಗೌಡ ಪೊಲೀಸ್ ಪಾಟೀಲ್, ಆರ್‍ಎಫ್‍ಓ ಸುಂದರ್, ಸಾಲನ್, ಪ್ರಸಾದ್, ನಂದೀಶ್, ಸೋಮೇಶ್, ತೀರ್ಥಪ್ರಸಾದ್, ಪರಶುರಾಮ ಭಜಂತ್ರಿ, ಮುಕುಂದವರ್ಮ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next