Advertisement

ಮತ್ತೆ ಕಾಣಿಸಿಕೊಂಡ ಕಾಡಾನೆ: ಹೆಚ್ಚಿದ ಆತಂಕ

02:19 PM May 12, 2022 | Niyatha Bhat |

ಶಿವಮೊಗ್ಗ: ಜಿಲ್ಲೆಯ ಉಂಬ್ಳೇಂಬೈಲು ಭಾಗದಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು, ಕಳೆದ ಕೆಲ ದಿನದಿಂದ ಗ್ರಾಮದ ಸನಿಹದ ಕಾಡಿನಲ್ಲೇ ಬೀಡುಬಿಟ್ಟಿದೆ.

Advertisement

ಉಂಬ್ಳೇಬೈಲು ಸರ್ಕಲ್‌ನಿಂದ ಕೈದೊಟ್ಲು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಒಂಟಿಸಲಗ ಪತ್ತೆಯಾಗಿದೆ. ಗ್ರಾಮದ ಸದಾನಂದ ಶೆಟ್ಟಿ ಎಂಬುವವರ ಮನೆ ಮುಂಭಾಗದಲ್ಲೂ ಓಡಾಡಿದೆ. ಹೀಗಾಗಿ, ಉಂಬ್ಳೇಬೈಲು ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಈ ಹಿಂದೆ ಕೂಡ ಉಂಬ್ಳೇಬೈಲು ಸುತ್ತಮುತ್ತಲ ಗ್ರಾಮದ ಅಡಿಕೆ, ಬಾಳೆ ತೋಟಕ್ಕೆ ನುಗ್ಗಿ ಕಾಡಾನೆಗಳು ಬೆಳೆ ನಾಶ ಮಾಡಿದ್ದವು.

ತಿಂಗಳ ಹಿಂದಷ್ಟೇ ಈ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ಲಕ್ಕಿನಕೊಪ್ಪ, ಉಂಬ್ಳೇಬೈಲು, ಮಾರಿದಿಬ್ಬ, ಕೈದೊಟ್ಲು, ಸಾಲಿಗೆರೆ, ಗೋಣಿಬೀಡು ಸೇರಿದಂತೆ ಹಲವು ಗ್ರಾಮಗಳಿಗೆ ನಿರಂತರವಾಗಿ ಆನೆಗಳು ದಾಳಿ ಮಾಡುತ್ತಿವೆ. ತೋಟಕ್ಕೆ ನುಗ್ಗಿ ಅಡಕೆ ಮರಗಳನ್ನೂ ಸಹ ಬುಡಮೇಲು ಮಾಡುತ್ತಿವೆ.

ಅರಣ್ಯ ಇಲಾಖೆ ಕೆಲವು ತಿಂಗಳ ಹಿಂದಷ್ಟೇ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿತ್ತು. ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಮತ್ತೆ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ಶಾಶ್ವತ ಪರಿಹಾರ ದೊರಕಿಸುವಂತೆ ರೈತರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಜೊತೆಗೆ ಫೆನ್ಸಿಂಗ್‌ ಅಥವಾ ಟ್ರಂಚ್‌ ನಿರ್ಮಿಸಲು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next