Advertisement

Forest Department ದೇಯಿಬೈದೆತಿ ಔಷಧೀಯ ವನ ಅಭಿವೃದ್ಧಿಗೆ ಕ್ರಮ

09:11 PM Nov 14, 2023 | Team Udayavani |

ಬಡಗನ್ನೂರು: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಪುತ್ತೂರು ಉಪ ವಿಭಾಗ, ಪುತ್ತೂರು ವಲಯ, ಗ್ರಾಮ ಅರಣ್ಯ ಸಮಿತಿ ಬಡಗನ್ನೂರು ಇದರ ಮಹಾಸಭೆ ಮತ್ತು ಹೊಸ ನಿರ್ವಹಣ ಸಮಿತಿ ಆಯ್ಕೆ ಪ್ರಕ್ರಿಯೆ ಪಟ್ಟೆ ಬಡಗನ್ನೂರು ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ನಡೆಯಿತು.

Advertisement

ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಮುಡಿಪಿನಡ್ಕ ಶ್ರೀ ದೇಯಿಬೈದೆತಿ ಔಷಧೀಯ ಉದ್ಯಾನವನ ಅಭಿವೃದ್ಧಿ ಪಡಿಸುವ ಬಗ್ಗೆ ಈಗಾಗಲೇ ಮೇಲಾಧಿಕಾರಿ ಯವರಿಂದ ಅನುಮತಿ ದೊರಕಿದೆ. ಮಕ್ಕಳಿಗೆ ಜಾರುಬಂಡಿ, ಹಾಗೂ ಇನ್ನಿತರ ಸೌಲಭ್ಯಗಳನ್ನು ಅಳವಡಿಸಲಾಗುವುದು. ಮುಕ್ತ ಅವಕಾಶ ನೀಡಲಾಗುವುದು. ಹಳ್ಳಿ ಜನರು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಗ್ರಾಮಾರಣ್ಯ ಸಮಿತಿ ಹುಟ್ಟು ಹಾಕಲಾಯಿತು ಎಂದರು.

ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ. ಉದ್ಘಾಟಿಸಿ ಮಾತನಾಡಿ ಗ್ರಾಮಾರಣ್ಯ ಸಮಿತಿ ಹತ್ತು ಹಲವು ಸಮಾಜಮುಖೀ ಕಾರ್ಯ ಮಾಡುತ್ತಾ ಬರುತ್ತಿದೆ. ಅರಣ್ಯ ಇಲಾಖೆ ಅಡಿಯಲ್ಲಿ ಸ್ವಸಹಾಯ ಸಂಘವನ್ನು ರಚಿಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ ಇದು ಬಡವರ ಪಾಲಿಗೆ ಅಶಾದೀಪವಾಗಿದೆ ಎಂದರು.

ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್‌ ಬಿ. ಎಂ., ಪಟ್ಟೆ ಶ್ರೀಕೃಷ್ಣ ಹಿ.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಎನ್‌. ಶುಭಹಾರೈಸಿದರು.

ಬಡಗನ್ನೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು.ಪಾಣಾಜೆ ವಲಯ ಉಪ ಅರಣ್ಯಾಧಿಕಾರಿ ಪ್ರಕಾಶ್‌ ರೈ ಸ್ವಾಗತಿಸಿದರು. ಗಸ್ತು ಅರಣ್ಯ ಪಾಲಕ ಲಿಂಗರಾಜು ವರದಿ ಮಂಡಿಸಿ ವಂದಿಸಿದರು.
ಗ್ರಾಮಾರಣ್ಯ ಸಮಿತಿ ಸದಸ್ಯ ಕೇಶವ ಪ್ರಸಾದ್‌ ನಿರೂಪಿಸಿದರು. ಬೆಟ್ಟಂಪ್ಪಾಡಿ ಗಸ್ತು ಅರಣ್ಯ ಪಾಲಕ ಸುಧೀರ್‌ ಹೆಗ್ಡೆ, ನೆಟ್ಟಣಿಗೆ ಮೂಟ್ನೂರು ಗಸ್ತು ಅರಣ್ಯ ಪಾಲಕ ಉಮೇಶ್‌, ಅರಣ್ಯ ವೀಕ್ಷಕರಾದ ದೇವಪ್ಪ ಅರಿಯಡ್ಕ, ವೆಂಕಪ್ಪ ಗೌಡ ಬಡಗನ್ನೂರು, ಹಾಗೂ ಚಾಲಕ ಜಗ್ಗದೀಶ್‌ ಮತ್ತಿತರರಿದ್ದರು.

Advertisement

ಪುತ್ತೂರು ತಾಲೂಕು ಕಂದಾಯ ನಿರೀಕ್ಷ ಗೋಪಾಲ ಚುನಾವಣಾಧಿಕಾರಿದ್ದರು. ಗ್ರಾಮಾರಣ್ಯ ಸಮಿತಿ ಅಧ್ಯಕ್ಷರಾಗಿ ಸವಿತಾ ಗೆಜ್ಜೆಗಿರಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next