Advertisement

Forest Department; 5.6 ಕೋಟಿ ಸಸಿಗಳ ನಾಟಿ: ಈಶ್ವರ ಖಂಡ್ರೆ

11:12 PM Feb 05, 2024 | Team Udayavani |

ಸುಳ್ಯ: ನಾನು ಸಚಿವನಾದ ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 5.6 ಕೋಟಿಸಸಿಗಳನ್ನು ನಾಟಿ ಮಾಡಿದ್ದೇವೆ. ಈ ಮೂಲಕ ಹಸಿರನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Advertisement

ಕೊಲ್ಲಮೊಗ್ರು ಗ್ರಾ.ಪಂ. ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಸಿ ನಾಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಪರಿಶೋಧನೆ ಮಾಡಲು ಸೂಚಿಸಲಾಗಿದೆ. ದೊಡ್ಡ ಪಟ್ಟಣಗಳಲ್ಲಿ ಆದ ಸುಮಾರು 2 ಸಾವಿರ ಎಕ್ರೆ ಜಮೀನು ಒತ್ತುವರಿ ತೆರವು ಗೊಳಿಸಿದ್ದೇವೆ. 35 ಸಾವಿರ ಎಕ್ರೆ ಅರಣ್ಯ ಮೀಸಲು ಅರಣ್ಯ ಎಂದು ಘೋಷಿಸಿದ್ದೇವೆ. ಮಾನವ ಪ್ರಾಣಿ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next