Advertisement
ಮನವಿಗೆ ಸ್ಪಂದನೆ ಶೂನ್ಯ!ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಗ್ರಾಮಸಭೆಗಳಲ್ಲಿ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದೇವೆ. ಆದರೆ ಯಾವ ಮನವಿಗೂ ಅರಣ್ಯ ಇಲಾಖೆ ಸ್ಪಂದನೆ ನೀಡಿಲ್ಲ. ಮರ ಬಿದ್ದು ಅನಾಹುತವಾದರೆ ಯಾರು ಹೊಣೆ? ಎಂದು ಪ್ರಶ್ನಿಸಿರುವ ಗ್ರಾಮಸ್ಥ ಗಣೇಶ್ ಭಟ್, ವಾಸ್ತವ ಅರಿತುಕೊಂಡು ಇಲಾಖಾಧಿಕಾರಿಗಳು ಜನಸಾಮಾ ನ್ಯರ ಕೂಗಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವು ಗ್ರಾಮಸಭೆ, ಸಾಮಾನ್ಯ ಸಭೆಗಳಲ್ಲಿ ನಿರ್ಣಯ ಕೈಗೊಂಡು ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಇಲಾಖೆಯವರು ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬದಲು ರಸ್ತೆಯಿಂದ ದೂರವಿರುವ ಮರಗಳನ್ನು ಗುರುತು ಮಾಡಿದ್ದಾರೆ. ಯಾವ ಮರ ಗಳು ಅಪಾಯಕಾರಿಯಾಗಿವೆ ಎನ್ನುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗಿಷ್ಟ ಬಂದ ಮರಗಳಿಗೆ ಗುರುತು ಹಾಕಿ ತೆರಳಿದ್ದಾರೆ ಎಂದು ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ ಅವರು ಹೇಳಿದ್ದಾರೆ. ಪರಿಶೀಲಿಸಲಾಗುವುದು
ಈ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕುರಿತು ಯಾವುದೇ ಅರ್ಜಿಗಳು ಬಂದಿಲ್ಲ. ಅರ್ಜಿ ಬಂದ ಬಳಿಕ ಪರಿಶೀಲಿಸಿ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಲಾಗುವುದು.
– ಕುಮಾರಸ್ವಾಮಿ ವಲಯ
ಅರಣ್ಯಾಧಿಕಾರಿ ನರಿಮೊಗರು
Related Articles
ಮರ ಬಿದ್ದು ಅಪಾಯ ಸಂಭವಿಸುವ ಮೊದಲು ತೆರವುಗೊಳಿಸಬೇಕು. ಕೆಲವು ದಿನಗಳ ಹಿಂದೆ ಕುಂಜಾಡಿಯಲ್ಲಿ ರಿಕ್ಷಾದ ಮೇಲೆ ಮರ ಬಿದ್ದು ರಿಕ್ಷಾ ಹಾನಿಗೊಳಗಾಗಿದೆ. ಭಾರೀ ಅನಾ ಹುತ ತಪ್ಪಿ ಹೋಗಿತ್ತು. ಮುಕ್ಕೂರು ಬಳಿ ರಸ್ತೆಗೆ ಮರ ಬಿದ್ದು ರಸ್ತೆ ತಡೆ ಉಂಟಾಗಿತ್ತು. ಕುಮಾರಮಂಗಲ-ಮಾಡಾವು ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸವಾಲಿನ ಕೆಲಸ ಎನ್ನುವಂತಾಗಿದೆ.
– ಶರೀಫ್ ಕುಂಡಡ್ಕ
ಸ್ಥಳೀಯ ನಿವಾಸಿ
Advertisement
ವಿಶೇಷ ವರದಿ