ಭಟ್ಕಳ: ಅರಣ್ಯ ಇಲಾಖೆಯು ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗಿಡ-ಮರಗಳನ್ನು ಕಡಿದಿದೆ ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಅವರು ಇಲ್ಲಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನ್‍ಮದ್ಲು ಮಜಿರೆಯಲ್ಲಿ ರವಿವಾರ ಅರಣ್ಯವಾಸಿಗಳನ್ನು ಉಳಿಸಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅರಣ್ಯ ವಾಸಿಗಳು ಅರಣ್ಯೀಕರಣಕ್ಕೆ ಪೂರಕವಾದ ಕಾರ್ಯ ಜರುಗಿಸುತ್ತಿದ್ದಾರೆ, ಆದರೆ ಅರಣ್ಯ ಅಧಿಕಾರಿಗಳು ಕಾಮಗಾರಿ, ಅಭಿವೃದ್ಧಿ, ಸಕಾಲದಲ್ಲಿ ನಿಸರ್ಗ ವಿಕೋಪಕ್ಕೆ ಕ್ರಮ ಜರುಗಿಸದೇ ಅರಣ್ಯ ನಾಶವಾಗುತ್ತಿದೆ ಎಂದೂ ಅವರು ದೂರಿದರು. ಅರಣ್ಯ ವಾಸಿಗಳನ್ನು ಉಳಿಸಿ ಜಾಥವು ಅರಣ್ಯವಾಸಿಗಳಲ್ಲಿ ನೈತಿಕ ಸ್ಥೆರ್ಯ, ಕಾನೂನು ತಿಳುವಳಿಕೆ ಹಾಗೂ ಜನಜಾಗೃತಿ ಮೂಡಿಸುವಲ್ಲಿ ಯಶಶ್ವಿಯಾಗುತ್ತಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ : ನಿರ್ಮಲಾ ಸೀತಾರಾಮನ್ ಕನಸಿನ 81 ಕೋಟಿ ರೂ. ವೆಚ್ಚದ ಯೋಜನೆ ಮೈಸೂರಿನಲ್ಲಿ
ಉಪಸ್ಥಿತರಿದ್ದು ಮಾತನಾಡಿದ ಇನಾಯತುಲ್ಲಾ ಶಾಬಂದ್ರಿ ಸಂಘಟನೆಯಿಂದ ಅರಣ್ಯ ಹಕ್ಕು ಪಡೆದುಕೊಳ್ಳಲು ಸಾಧ್ಯ. ಸಂಘಟನೆಗೆ ಬಲ ತುಂಬಬೇಕು. ಅರಣ್ಯವಾಸಿಗಳ ವಿರುದ್ಧ ನಡೆಯುವ ದೌರ್ಜನ್ಯದ ವಿರುದ್ಧ ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆ ಸದಾ ಇದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ದೇವರಾಗ ಗೊಂಡ, ಕಯುಂ ಸಾಬ, ಸವಿತಾ ಗೊಂಡ ಮಾತನಾಡಿದರು. ಶಬ್ಬೀರ್ ಸಾಬ್, ರಿಜ್ವಾನ್, ರಮೇಶ ನಾಯ್ಕ, ವೆಂಕಟೇಶ ವೈದ್ಯ, ಅನಂತ ಮೊಗೇರ, ಕಾವೇರಿ ನಾಯ್ಕ, ಭಾಸ್ಕರ ಗೊಂಡ, ಗಣಪತಿ ಗೊಂಡ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೇದಿಕೆಯ ಸಂಚಾಲಕ ಪಾಂಡುರಂಗ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾರಿ ಮಾತನಾಡಿದರು.