Advertisement

ಚಿರತೆ ಮರಿ ಪ್ರತ್ಯಕ್ಷ; ಸೆರೆ ಹಿಡಿದು ಪೋಷಣೆಗೆ ಕೆರೆತಂದ ಅರಣ್ಯ ಇಲಾಖೆ

07:46 PM Apr 19, 2022 | Team Udayavani |

ಗುಡಿಬಂಡೆ: ಪಟ್ಟಣದ ಸುರಸದ್ಮಗಿರಿ ಬೆಟ್ಟದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಒಂದು ವರ್ಷದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಂರಕ್ಷಣೆ ಮಾಡಿ, ಕಚೇರಿಯಲ್ಲಿ ಸುಸೂರ್ಷೆ ಮಾಡುತ್ತಿದ್ದಾರೆ.

Advertisement

ಸುರಸದ್ಮಗಿರಿ ಬೆಟ್ಟದ ಹಿಂಭಾಗದ ಎರ್ರಕೊಂಡ ಅರಣ್ಯ ಸಮೀಪದಲ್ಲಿ ಚಿರತೆ ಮರಿ ಅಸ್ವಸ್ಥ ಸ್ಥಿತಿಯಲ್ಲಿ ಮುಳ್ಳು ಪೊದೆಯಲ್ಲಿ ಇರುವುದನ್ನು ಕಂಡ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಹರೀಶ್, ವಿಷಯವನ್ನು ಪತ್ರಕರ್ತರಿಗೂ ಮತ್ತು ಅರಣ್ಯ ಇಲಾಖೆಗೂ ವಿಚಾರ ಮುಟ್ಟಿಸಿದ್ದು, ತಕ್ಷಣ ಪತ್ರಕರ್ತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಸುಮಾರು ಒಂದು ವರ್ಷದ ಚಿರತೆ ಮರಿಯನ್ನು ರಕ್ಷಿಸಿ, ಅಸ್ವಸ್ಥಗೊಂಡಿದ್ದ ಸಿಬ್ಬಂದಿಯನ್ನು ಕಚೇರಿ ತಂದು ಪೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕೃಷಿ ಸಚಿವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದವರು ರಸ್ತೆ ಅಪಘಾತದಲ್ಲಿ ಸಾವು

ಚೇತರಿಕೆಯಲ್ಲಿ ಚಿರತೆ: ಮುಳ್ಳಿನ ಪೊದೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಚಿರತೆಯನ್ನು ಕರೆ ತಂದ ಸಿಬ್ಬಂದಿ ಕನಕರಾಜ್ ಮತ್ತು ತಂಡ ಕಚೇರಿಯಲ್ಲಿ ಚಿರತೆ ಮರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಸ್ವಲ್ಪ ಮಟ್ಟಿಗೆ ಚಿರತೆ ಚೇತರಿಕೆಗೊಂಡಿದೆ ಎಂದರು.

ಚಿರತೆ ಬೀತಿ: ಒಂದೆರಡು ತಿಂಗಳ ಹಿಂದೆ ಎಲ್ಲೋಡು ಗ್ರಾಮ ಸುತ್ತಮುತ್ತಲಿನಲ್ಲಿ ಎರಡು ಚಿರತೆಗಳು ಕುರಿ ದೊಡ್ಡಿಯ ಮೇಲೆ ದಾಳಿ ಮಾಡಿರುವ ಘಟನೆ ಮರೆ ಮಾಚುವ ಹೊತ್ತಿನಲ್ಲೇ, ಗುಡಿಬಂಡೆ ಪಟ್ಟಣದ ಸಮೀಪದಲ್ಲೇ ಚಿರತೆ ಮರಿ ಕಂಡು ಬಂದಿದ್ದು, ಅರಣ್ಯ ಸಿಬ್ಬಂದಿ ಹೇಳುವ ಪ್ರಕಾರ ಚಿರತೆಗಳು ಇನ್ನು ಅರಣ್ಯದಲ್ಲೇ ಇರಬಹುದು ಎಂದು ಸಂದೇಶ ವ್ಯಕ್ತಪಡಿಸಿದ್ದಾರೆ.

Advertisement

ಜಾನುವಾರು ಮೇಯಿಸುವವರಿಗೆ ಎಚ್ಚರಿಕೆ: ಪಟ್ಟಣದ ಸುರಸದ್ಮಗಿರಿ ಬೆಟ್ಟದ ಹಿಂಭಾಗದಲ್ಲಿ ಮತ್ತು ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಾಹಿಗಳು ಮತ್ತು ಜಾನುವಾರು ಮೇಯಿಸುವವರು ಹೆಚ್ಚಿಗೆ ಹೋಗುತ್ತಿದ್ದು, ಈ ಪ್ರದೇಶದಲ್ಲಿ ಚಿರತೆಗಳು ಓಡಾಡುತ್ತಿರುವುದು ಕಂಡು ಬಂದಿದ್ದು, ಕುರಿಗಾಹಿಗಳು ಮತ್ತು ಜಾನುವಾರು ಮೇಯಿಸುವವರು ಹೆಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next