ಬಂಟ್ವಾಳ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರಣ್ಯ ರಕ್ಷಣೆ , ವನಮಹೋತ್ಸವದ ಮಹತ್ವವನ್ನು ವಿವರಿಸಿದರು.
Advertisement
ಸ್ಥಳೀಯ ಪ್ರಮುಖ ರಮೇಶ್ ವಗ್ಗ ಅತಿಥಿಯಾಗಿ ಮಾತನಾಡಿ ಅರಣ್ಯ ಸಂರಕ್ಷಣೆ ಕೇವಲ ಸರಕಾರದ ಮತ್ತು ಅಧಿಕಾರಿಗಳ ಕೆಲಸವಾಗಿರದೆ, ಅದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಹಸಿರು ಕ್ರಾಂತಿಯ ಹರಿಕಾರ ಮಂಗಳೂರಿನ ಮಾಧವ ಉಳ್ಳಾಲ್ ಮತ್ತು ಸಾಲುಮರದ ತಿಮ್ಮಕ್ಕರಂತಹವರು ಹಳ್ಳಿ ಹಳ್ಳಿಗಳಲ್ಲಿ ನಿರ್ಮಾಣವಾಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರದ ರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದಿನ ಪೀಳಿಗೆಯು ಮರ ಗಿಡಗಳನ್ನು ಕೇವಲ ಪುಸ್ತಕ ಇಲ್ಲವೆ ಪತ್ರಿಕೆಗಳಲ್ಲಿ ನೋಡಬೇಕಾದ ಪರಿಸ್ಥಿತಿ ಎದುರಾಗಬಹುದು . ಅರಣ್ಯ ಸಂರಕ್ಷಣೆ ಮಾಡುವುದರೊಂದಿಗೆ ಉತ್ತಮ ಆರೋಗ್ಯಯುತ ವಾತಾವರಣ ನಿರ್ಮಿಸಬೇಕು ಮತ್ತು ಅರಣ್ಯಕ್ಕೆ ಮಾರಕ ವಾಗುತ್ತಿರುವ ಕಲ್ಲಿನ ಕೋರೆಗಳನ್ನು ಅರಣ್ಯ ಪ್ರದೇಶದಲ್ಲಿ ನಿಷೇಧಿಸುವ ನಿಟ್ಟಿನಲ್ಲಿ ಸರಕಾರವು ಗಮನಹರಿಸಬೇಕು ಎಂದು ಒತ್ತಾಯಿಸಿದರು.