Advertisement

ಪಾರ್ಟಿಯಲ್ಲಿ ಡ್ರಗ್ಸ್‌ ಮಾರುತ್ತಿದ್ದ ವಿದೇಶಿ ಮಹಿಳೆ ಬಂಧನ

10:20 AM Jun 17, 2022 | Team Udayavani |

ಬೆಂಗಳೂರು: ಕಾಫಿ ಡೇ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಹದೇವಪುರ ನಿವಾಸಿ ಫಾತೀಮಾ ಒಮ್ರಿ(30) ಬಂಧಿತೆ. ಆಕೆಯಿಂದ 1.5 ಲಕ್ಷ ರೂ. ಮೌಲ್ಯದ 13 ಗ್ರಾಂ ಎಂಡಿಎಂಎ ಮಾತ್ರೆಗಳು, ಒಂದು ಐಫೋನ್‌ ಜಪ್ತಿ ಮಾಡಲಾಗಿದೆ. ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಮ್ಮನಹಳ್ಳಿ ರಸ್ತೆಯ ಕಾಫಿ ಡೇ ಬಳಿ ವಿದೇಶಿ ಮಹಿಳೆಯೊಬ್ಬಳು ಡ್ರಗ್ಸ್‌ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಸಂಗೀತ ಚೌಹಾಣ್‌ ಮತ್ತು ತಂಡ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆಕೆ ಬಳಿ ಮಾದಕವಸ್ತುಗಳು ಪತ್ತೆಯಾಗಿವೆ. ಆಕೆ ವಿರುದ್ಧ ಎನ್‌ಡಿಪಿಎಸ್‌ ಮತ್ತು ವಿದೇಶಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ತಾಂಜೇನಿಯಾ ದೇಶದ ಫಾತೀಮಾ, 2018ರಲ್ಲಿ ಪ್ರವಾಸ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಫಾತೀಮಾ ಇಲ್ಲಿಯೇ ಅಕ್ರಮವಾಗಿ ವಾಸವಾಗಿದ್ದಾರೆ. ಅಕ್ರಮ ಹಣಗಳಿಸುವ ಉದ್ದೇಶದಿಂದ ಮುಂಬೈ, ದೆಹಲಿಯಲ್ಲಿರುವ ವಿದೇಶಿ ಪ್ರಜೆಗಳಿಂದ ಪಾರ್ಟಿ ಡ್ರಗ್ಸ್‌ಗಳನ್ನು ತರಿಸಿ, ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಈಕೆ ವಿರುದ್ಧ ಈ ಹಿಂದೆ ಡಿ.ಜೆ.ಹಳ್ಳಿ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ನಗರದ ಬೇರೆ ಬೇರೆ ಠಾಣೆಗಳಲ್ಲೂ ಈಕೆ ವಿರುದ್ಧ ಪ್ರಕರಣ ದಾಖಲಾಗಿರುವ ಸಾಧ್ಯತೆಗಳಿವೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next