Advertisement

12 ಉಗ್ರ ಸಂಘಟನೆಗಳಿಗೆ ಪಾಕ್‌ ಆಶ್ರಯ

07:33 PM Sep 29, 2021 | Team Udayavani |

ವಾಷಿಂಗ್ಟನ್‌: ಪಾಕಿಸ್ತಾನದಲ್ಲಿ 12 ವಿದೇಶಿ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡಲಾಗುತ್ತಿದೆ. ಈ ಪೈಕಿ ಅದು ಭಾರತವನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿವೆ ಎಂದು ಅಮೆರಿಕ ಸಂಸತ್‌ನ ಸಂಶೋಧನಾ ಸೇವೆಯ ವರದಿಯಲ್ಲಿ ಉಲ್ಲೇಖೀಸಿದೆ.

Advertisement

ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆ 2008ರ ಮುಂಬೈ ದಾಳಿ ನಡೆಸಿ ಜೀವ ಹಾನಿಗೆ ಕಾರಣವಾಗಿದೆ. ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮಸೂದ್‌ ಅಝರ್‌ನಿಂದ ಸ್ಥಾಪನೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಲ್ಲಿ ನಿರತವಾಗಿದೆ ಎಂದು ಉಲ್ಲೇಖೀಸಲಾಗಿದೆ.

ಹರ್ಕತ್‌-ಉಲ್‌ ಜಿಹಾದಿ ಇಸ್ಲಾಮಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನಕ್ಕೆ ಸೇರುವ ಗುರಿ ಹಾಕಿಕೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. 1999ರಲ್ಲಿ ಭಾರತದ ವಿಮಾನ ಅಪಹರಣದ ರೂವಾರಿ  ಸಂಘಟನೆ ಹರ್ಕತ್‌-ಉಲ್‌-ಮುಜಾಹಿದೀನ್‌ ಜೈಶ್‌ ಸಂಘಟನೆಯ ಸ್ಥಾಪನೆಗೆ ಕಾರಣನಾದ ಮಸೂದ್‌ ಅಜರ್‌ನ ಬಿಡುಗಡೆಗೆ ಕಾರಣವಾಗಿತ್ತು ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಹಿಜ್ಬುಲ್‌ ಮುಜಾಹಿದೀನ್‌ ಕೂಡ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next