Advertisement

Inflation: ಹಣದುಬ್ಬರ ನಿಯಂತ್ರಣಕ್ಕೆ ರಷ್ಯಾ ತೈಲ ನೆರವು- ಜೈಶಂಕರ್‌ ಪ್ರತಿಪಾದನೆ

08:47 PM Nov 16, 2023 | Team Udayavani |

ಲಂಡನ್‌: “ನಾವು ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸಿ ಇರಿಸಿದ್ದರಿಂದ ಜಗತ್ತಿನ ಹಣದುಬ್ಬರ ತಗ್ಗಿಸುವಲ್ಲಿ ನೆರವಾಗಿದ್ದೇವೆ. ನಮಗೆ ತೈಲ ಪೂರೈಸಿದ ರಷ್ಯಾಕ್ಕೆ ಧನ್ಯವಾದ ಸಮರ್ಪಿಸಬೇಕಾಗಿದೆ’

Advertisement

– ಹೀಗೆಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಲಂಡನ್‌ನಲ್ಲಿ ಹೇಳಿದ್ದಾರೆ. ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉಕ್ರೇನ್‌ ದಾಳಿಯ ಬಳಿಕ ಐರೋಪ್ಯ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಹಿಂದೇಟು ಹಾಕಿದವು. ಜತೆಗೆ ರಷ್ಯಾದಿಂದ ತೈಲ ಖರೀದಿ ಬಗ್ಗೆ ಎದ್ದಿದ್ದ ಆಕ್ಷೇಪಗಳನ್ನೂ ತಿರಸ್ಕರಿಸಿದ್ದಾರೆ .

“ನಮ್ಮ ಸರ್ಕಾರ ಎಚ್ಚರಿಕೆಯ ನಿಲುವು ತೆಗೆದುಕೊಂಡಿತು. ರಷ್ಯಾ ಹೊಂದಿರುವ ಸಂಪನ್ಮೂಲವನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಏಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ ಐರೋಪ್ಯ ಒಕ್ಕೂಟಕ್ಕೂ ಪೂರೈಕೆಯಾಗುತ್ತಿದೆ ಎಂದರು. ಆ ಪೈಕಿ ಒಂದಂಶ ನಾವು ಖರೀದಿಸಿ, ಜಗತ್ತಿನ ಹಣದುಬ್ಬರ ತಗ್ಗಿಸಿದ್ದೇವೆ ಎಂದರು.

ಧರ್ಮಾತೀತವಲ್ಲ:
ಭಾರತದಲ್ಲಿನ ಜಾತ್ಯತೀತತೆ (ಸೆಕ್ಯುಲರಿಸಂ) ಬಗೆಗಿನ ಬಗ್ಗೆ ಮಾತನಾಡಿದ ಅವರು, ಧರ್ಮಗಳನ್ನು ಅನುಸರಿಸದೇ ಇರುವುದು ಅಲ್ಲ. ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡುವುದೇ ಜಾತ್ಯತೀತತೆ ಎಂದರು. ಸಮಾನತೆಯ ಆಧಾರದಲ್ಲಿ ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಗಳಿಂದಾಗಿ ಆ ನಿಲುವು ಸ್ವಯಂ ಅವಹೇಳನಕಾರಿಯಾಗಿದೆ ಎಂದರು.

ಕಳವಾಗಿದ್ದ 2 ಮೂರ್ತಿಗಳು ಸ್ವದೇಶಕ್ಕೆ
ದೇಶದಿಂದ ಕಳವಾಗಿದ್ದ 8ನೇ ಶತಮಾನಕ್ಕೆ ಸೇರಿದ 2 ದೇವರ ವಿಗ್ರಹಗಳನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಸಚಿವ ಜೈಶಂಕರ್‌ ನಡೆಸಿದ ಯತ್ನ ಯಶಸ್ವಿಯಾಗಿದೆ. ಉ.ಪ್ರ.ದ ಲೊಖಾರಿ ಎಂಬಲ್ಲಿಂದ 1970 ಮತ್ತು 1980 ನಡುವಿನ ಅವಧಿಯಲ್ಲಿ ಕಳವಾಗಿದ್ದ ಯೋಗಿನಿ ಚಾಮುಂಡ ಮತ್ತು ಯೋಗಿನಿ ಗೋಮುಖೀ ವಿಗ್ರಹಗಳು ಮತ್ತೆ ಸ್ವದೇಶಕ್ಕೆ ಶೀಘ್ರವೇ ವಾಪಸಾಗಲಿವೆ. 1970ರ ಸಂದರ್ಭದಲ್ಲಿ ವಿಗ್ರಹ ಕಳ್ಳರ ಗುಂಪು ಅವುಗಳನ್ನು ಕಳವು ಮಾಡಿತ್ತು. ಇತ್ತೀಚೆಗೆ ಅವುಗಳು ಪತ್ತೆಯಾಗಿದ್ದವು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next