Advertisement

ಸುಷ್ಮಾರನ್ನು ಅನುಸರಿಸಲು ಹೆಮ್ಮೆ ಯೆನಿಸುತ್ತದೆ; ಡಾ.ಎಸ್‌.ಜೈಶಂಕರ್‌

10:19 AM Jun 02, 2019 | Vishnu Das |

ಹೊಸದಿಲ್ಲಿ: ಸುಷ್ಮಾ ಸ್ವರಾಜ್‌ ಜಿ ಅವರಹೆಜ್ಜೆಗಳನ್ನು ಅನುಸರಿಸಲು ಹೆಮ್ಮೆ ಎನಿಸುತ್ತಿದೆ ಎಂದು ನೂತನ ವಿದೇಶಾಂಗ ಸಚಿವ ಡಾ.ಸುಬ್ರಮಣ್ಯಂ ಜೈಶಂಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

Advertisement

ಶುಭಹಾರೈಕೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು. ಈ ಜವಾಬ್ದಾರಿಯನ್ನು ನೀಡಿ ಗೌರವಿಸಲಾಗಿದೆ. ಸುಷ್ಮಾ ಸ್ವರಾಜ್‌ ಜಿ ಅವರ ಹೆಜ್ಜೆಗಳನ್ನು ಅನುಸರಿಸಲು ಹೆಮ್ಮೆ ಎನಿಸುತ್ತಿದೆ ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಸಹಾಯಕ ವಿದೇಶಾಂಗ ಸಚಿವ ವಿ.ಮುರಳೀಧರನ್‌ ಅವರನ್ನುಟ್ಯಾಗ್‌ ಮಾಡಿ , 24*7 ಸೇವೆ ನೀಡಲು ವಿದೇಶಾಂಗ ಇಲಾಖೆ ಸಿದ್ದವಾಗಿದೆ. ಸಹುದ್ಯೋಗಿ ಮುರಳೀರನ್‌ ಅವರೊಂದಿಗೆ ಪ್ರಯತ್ನಗಳನ್ನು ಮುಂದುವರಿಸಲು ಸಂತಸವಾಗುತ್ತಿದೆ ಎಂದು ಬರೆದಿದ್ದಾರೆ.

1977 ರ ಐಎಫ್ಎಸ್‌ ಅಧಿಕಾರಿಯಾಗಿದ್ದ ಜೈಶಂಕರ್‌ 2015 ರಿಂದ 2018 ರ ವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next