Advertisement

ಕನ್ನಡದೊಂದಿಗೆ ಅನ್ಯಭಾಷಾ ಜ್ಞಾನ ಅವಶ್ಯ

03:53 PM Jun 03, 2017 | |

ಧಾರವಾಡ: ಕನ್ನಡದೊಂದಿಗೆ ಅನ್ಯಭಾಷಾ ಜ್ಞಾನವೂ ಅವಶ್ಯ ಎಂದು ಹಿರಿಯ ಸಾಹಿತಿ ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು. ನಗರದ ಕವಿವಿಯ ಡಾ|ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ನಡೆದ ಪೀಠದ ನೂತನ ಅಧ್ಯಕ್ಷ ಡಾ|ಜೆ.ಎಂ. ನಾಗಯ್ಯ ಅವರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. 

Advertisement

ಕನ್ನಡವು ಶ್ರೀಮಂತ ಭಾಷೆ. ಇದು ಜ್ಞಾನದ ಅನರ್ಘ‌ ರತ್ನಗಳನ್ನು ತನ್ನ ಒಡಲಲ್ಲಿ ವಿಸ್ತರಿಸಿಕೊಂಡಿದೆ. ಇದನ್ನು ನಾವು ಸಮಗ್ರವಾಗಿ ಅಧ್ಯಯನ ಮಾಡಬೇಕು. ಇದರೊಂದಿಗೆ ಇತರ ಭಾಷೆಯನ್ನು ವಿಶಾಲ ಮನಸ್ಸಿನಿಂದ ಕಲಿತು ಅಂತರಶಿಸ್ತೀಯ ಅಧ್ಯಯನ ಮಾಡಬೇಕು ಎಂದರು. 

ಕನ್ನಡ ನಾಡು-ನುಡಿಯ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ಅಧ್ಯಯನ ಪೀಠವು ತೀ.ನಂ.ಶ್ರೀ ಮತ್ತು ಆರ್‌.ಸಿ. ಹಿರೇಮಠರು ಅಧ್ಯಕ್ಷರಾದ ಆರಂಭದ ಕಾಲದಿಂದಲೂ ಪಾಠ ಬೋಧನೆ, ಸಂಶೋಧನೆ ಹಾಗೂ ಪ್ರಕಟಣೆಗಳನ್ನು ನಿರಂತರವಾಗಿ ಮಾಡುತ್ತಿದೆ. ನೂತನ ಅಧ್ಯಕ್ಷ ಡಾ|ಜೆ.ಎಂ. ನಾಗಯ್ಯನವರು ವಿನಯಶೀಲ ವಿದ್ವಾಂಸರಾಗಿದ್ದಾರೆ.

ತಮ್ಮ ಸೇವೆಯ ಮೂಲಕ ಇದನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು. ಕವಿವಿ ಮೌಲ್ಯಮಾಪನ ಕುಲಸಚಿವ ಡಾ|ಎನ್‌. ವೈ.ಮಟ್ಟಿಹಾಳ ಮಾತನಾಡಿ, ಡಾ|ಜೆ.ಎಂ. ನಾಗಯ್ಯ ಅವರು ಸಹೃದಯ ಸಂಪನ್ನರು. ಗಟ್ಟಿಯಾದ ಸಂಶೋಧನ ಕಾರ್ಯಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 

ಇದರ ಜೊತೆಗೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದಾರೆ. ವಿಶ್ವವಿದ್ಯಾಲಯದ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಇವರ ಅವ ಧಿಯಲ್ಲಿ ಕನ್ನಡ ಅಧ್ಯಯನ ಪೀಠ ಉತ್ತಮ ಕಾರ್ಯಗಳನ್ನು ಮಾಡುತ್ತದೆ ಎಂದರು. ಡಾ|ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ| ಜೆ.ಎಂ.ನಾಗಯ್ಯ ಮಾತನಾಡಿ, ಈ ಪೀಠದ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಸುದೈವ.

Advertisement

ಈ ವಿಭಾಗವು  ಕನ್ನಡದ ಶ್ರೇಷ್ಠ ವಿದ್ವಾಂಸರ ಅಧ್ಯಕ್ಷತೆಯಲ್ಲಿ ಮುನ್ನಡೆದಿದೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನವೀನ  ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿ ಸ್ನೇಹಿಯಾಗಿ ವಿಭಾಗವನ್ನು ಮುನ್ನಡೆಸುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ| ಧನವಂತ ಹಾಜವಗೋಳ ಮಾತನಾಡಿ, ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು ಎಂಬುದಕ್ಕೆ ಡಾ|ಜೆ. .ನಾಗಯ್ಯನವರೇ ಸಾಕ್ಷಿ ಎಂದರು. 

ನೂತನ ಅಧ್ಯಕ್ಷರನ್ನು ಸಂಶೋಧನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸನ್ಮಾನಿಸಿದರು. ಡಾ|ಸಿದ್ದಣ್ಣ ಉತ್ನಾಳ, ಡಾ|ಕಲ್ಲಯ್ಯ ಹಿರೇಮಠ, ಎಂ.ಸಿ. ಬಂಡಿ, ಮೂರುಸಾವಿರಪ್ಪ ಕೊರವಿ, ಎಸ್‌.ಜಿ. ಪಾಟೀಲ, ಶಿವಶರಣ ಬಾರಿಕೇರ, ಡಾ|ರುದ್ರಪ್ಪ ಕರಿಶೆಟ್ಟಿ, ಡಾ|ರಾಜೇಶ್ವರಿ ಸಾಲಿ, ಡಾ|ಬಿ.ಬಸವನಗೌಡ, ಡಾ|ಶಾಮಲಾ ರತ್ನಾಕರ, ಡಾ|ವಿ.ಎಲ್‌.ಪಾಟೀಲ ಇದ್ದರು. ಸಂತೋಷ ಹಿರೇಮಠ ಸ್ವಾಗತಿಸಿದರು. ಎಸ್‌.ಎಸ್‌. ದೊಡ್ಡಮನಿ ನಿರೂಪಿಸಿದರು. ರೆಹಮಾನ ಗೊರಜನಾಳ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next