Advertisement

ಕುಂಬ್ರ: ದೇಶಿ ಹೊಟೇಲ್‌ನಲ್ಲಿ ವಿದೇಶಿ ಕರೆನ್ಸಿಗಳ ಮೋಡಿ

10:05 PM Oct 16, 2019 | mahesh |

ಬಡಗನ್ನೂರು: ಕೆಲವರು ವಿಶಿಷ್ಟ ಹವ್ಯಾಸದಿಂದಲೇ ಗುರುತಿಸಿಕೊಳ್ಳುತ್ತಾರೆ. ಅಂಥವರಲ್ಲಿ ಕುಂಬ್ರದ ಅಲ್ರಾಯ ಹೊಟೇಲ್‌ ಮಾಲಕ ರಫೀಕ್‌ ಉಜಿರೋಡಿ ಪ್ರಮುಖರು.

Advertisement

ರಫೀಕ್‌ ವಿದೇಶಿ ಕರೆನ್ಸಿಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದು, ಅವರ ಹೊಟೇಲ್‌ನಲ್ಲಿ 27 ದೇಶಗಳ ನೋಟುಗಳು ಕಾಣಸಿಗುತ್ತವೆ. 8 ವರ್ಷಗಳಿಂದ ನೋಟುಗಳನ್ನು ಸಂಗ್ರಹಿ ಸುತ್ತಿರುವ ಅವರು, ಕ್ಯಾಶ್‌ ಕೌಂಟರ್‌ನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ.

ವೈವಿಧ್ಯಮಯ ಸಂಗ್ರಹ
ರಫೀಕ್‌ ಅವರ ಬಳಿ ನಮ್ಮ ದೇಶ ಮಾತ್ರವಲ್ಲದೆ, ಸೌದಿ ಅರೇಬಿಯಾ, ಕತಾರ್‌, ಒಮಾನ್‌, ಕುವೈಟ್‌, ಲಿಬಿಯಾ, ಬಹರೈನ್‌, ಭೂತಾನ್‌, ಇರಾನ್‌, ಇರಾಕ್‌, ಸಿರಿಯಾ, ಅಫ್ಘಾನಿಸ್ಥಾನ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಚೀನ, ಇಂಡೋನೇಷ್ಯಾ, ಮಲೇಷ್ಯಾ, ಅಮೆರಿಕ, ನೇಪಾಲ, ಬಾಂಗ್ಲಾದೇಶ, ಇಥಿಯೋಪಿಯಾ, ಶ್ರೀಲಂಕಾ, ಫಿಲಿಪ್ಪೀನ್ಸ್‌, ಬ್ರಿಟನ್‌ ಇತ್ಯಾದಿ ದೇಶಗಳ ನೋಟುಗಳಿವೆ.

8 ವರ್ಷಗಳ ಹವ್ಯಾಸ
ರಫೀಕ್‌ ಕುಂಬ್ರದಲ್ಲಿ ಹೊಟೇಲ್‌ ಉದ್ಯಮ ಪ್ರಾರಂಭಿಸಿ 8 ವರ್ಷಗಳು ಕಳೆದಿವೆ. ಉದ್ಯಮಕ್ಕೆ ಕಾಲಿಡುವಾಗಲೇ ನೋಟುಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭದಲ್ಲಿ ಅಲ್ಲಿನ ಕೆಲವು ನೋಟುಗಳನ್ನು ಅವರು ಸಂಗ್ರಹಿಸಿದ್ದರು.

ಗ್ರಾಹಕರಿಂದ ಸಂಗ್ರಹ
ಕೆಲವು ದೇಶಗಳ ನೋಟುಗಳನ್ನು ಹೊಟೇಲ್‌ಗೆ ಬರುವ ಗ್ರಾಹಕರಿಂದ ಸಂಗ್ರಹಿಸಿದ್ದಾರೆ. ಇತ್ತೀಚೆಗೆ ಚೀನದ ಪ್ರಜೆಯೊಬ್ಬರು ಹೊಟೇಲ್‌ಗೆ ಭೇಟಿ ನೀಡಿದ್ದರು.

Advertisement

ಚೀನ ನೋಟುಗಳಿವೆ
ಸೌದಿ ಅರೇಬಿಯಾ, ಇರಾಕ್‌, ಕುವೈಟ್‌ ಇತ್ಯಾದಿ ದೇಶಗಳ ಕರೆನ್ಸಿಗಳನ್ನು ಸುಲಭದಲ್ಲಿ ಸಂಗ್ರಹಿಸಬಹುದು. ಆದರೆ ಚೀನ, ಇಂಗ್ಲೆಂಡ್‌, ಭೂತಾನ್‌, ಅಫ್ಘಾನಿಸ್ಥಾನ ಇತ್ಯಾದಿ ದೇಶಗಳ ನೋಟುಗಳನ್ನು ಸಂಗ್ರಹಿಸುವುದು ಸುಲಭವಲ್ಲ. ಆದರೆ ರಫೀಕ್‌ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಷ್ಟು ದೇಶಗಳ ನೋಟುಗಳನ್ನು ಸಂಗ್ರಹಿಸಬೇಕು ಎಂಬ ಆಸೆ ಇದ್ದು, ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ. ನೋಟು ಸಂಗ್ರಹವನ್ನು ನೋಡಿದ ಅವರು ತನ್ನ ದೇಶದ ನೋಟೊಂದನ್ನು ಕೊಟ್ಟು ಹೋಗಿದ್ದಾರೆ.

ರಫೀಕ್‌ ಅವರ ನೋಟು ಸಂಗ್ರಹದ ಹವ್ಯಾಸವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಹೊಟೇಲ್‌ಗೆ ಭೇಟಿ ನೀಡಿದ ಬೇರೆ ಬೇರೆ ರಾಜ್ಯದ, ದೇಶದ ಜನರು ನೋಟುಗಳನ್ನು ಕಂಡು ಖುಷಿಪಟ್ಟಿದ್ದಾರೆ. ತಮ್ಮ ದೇಶದ ನೋಟು ಕಾಣುತ್ತಿಲ್ಲ ಎಂದು ಭಾವಿಸಿದವರು ಅವುಗಳನ್ನು ರಫೀಕ್‌ ಅವರಿಗೆ ಕೊಟ್ಟು ಹೋಗಿದ್ದಾರೆ ಎನ್ನುತ್ತಾರೆ ರಫೀಕ್‌. ಇತ್ತೀಚೆಗೆ ಇವರ ಹೊಟೇಲ್‌ ಕ್ಯಾಶ್‌ ಕೌಂಟರ್‌ ಮೇಲೆ ರಾತ್ರಿ ವೇಳೆ ನವಿಲೊಂದು ಕುಳಿತು ಅಚ್ಚರಿ ಮೂಡಿಸಿತ್ತು. ಆ ದೃಶ್ಯವನ್ನು ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next