Advertisement
ಪುತ್ತೂರಿನ “ಶ್ರೀ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ದತ್ತು ಕೇಂದ್ರ’ವು ಜಿಲ್ಲೆಯ ಏಕೈಕ ದತ್ತು ಕೇಂದ್ರ. ಅಲ್ಲಿರುವ 6 ವರ್ಷದೊಳಗಿನ 25 ಮಕ್ಕಳ ಪೈಕಿ 7 ಮಕ್ಕಳು ವಿಶೇಷ ಅಗತ್ಯವುಳ್ಳವರು. ಕಡಿಮೆ ತೂಕ (ಲೋ ಬರ್ತ್ ವೈಟ್)ವುಳ್ಳ 3 ವರ್ಷದ ಮಗುವನ್ನು ದತ್ತು ಪಡೆಯಲು ಅಮೆರಿಕದ ದಂಪತಿ, ಕಿವಿ ಕೇಳಿಸದ 3 ವರ್ಷದ ಮಗುವನ್ನು ದತ್ತು ಪಡೆಯಲು ಇಟೆಲಿಯ ದಂಪತಿ ನೋಂದಣಿ ಮಾಡಿಕೊಂಡಿದ್ದಾರೆ.
Related Articles
Advertisement
ದ.ಕ. ಜಿಲ್ಲೆಯ ದತ್ತು ಕೇಂದ್ರದಿಂದ 2010ರಿಂದ ಇದುವರೆಗೆ ಒಟ್ಟು 136 ಮಕ್ಕಳನ್ನು ದತ್ತು ನೀಡಲಾಗಿದ್ದು ಅದರಲ್ಲಿ ಒಂದು ವಿಶೇಷ ಮಗುವನ್ನು ಭಾರತೀಯರಿಗೆ ದತ್ತು ನೀಡಲಾಗಿದೆ. ಕಳೆದ ವರ್ಷ 12 ಮಕ್ಕಳನ್ನು ದತ್ತು ನೀಡಲಾಗಿತ್ತು. ಈ ವರ್ಷ ಇದುವರೆಗೆ 4 ಮಕ್ಕಳನ್ನು ದತ್ತು ನೀಡಲಾಗಿದೆ. ವರ್ಷಕ್ಕೆ ಸುಮಾರು ಸರಾಸರಿ 10-12 ಮಕ್ಕಳನ್ನು ದತ್ತು ನೀಡಲಾಗುತ್ತಿದೆ.
ಉಡುಪಿ: 3 ಮಕ್ಕಳು ಅಮೆರಿಕಕ್ಕೆ :
ಉಡುಪಿ ಸಂತೆಕಟ್ಟೆಯ ಕೃಷ್ಣಾಶ್ರಮ ದತ್ತು ಕೇಂದ್ರದಿಂದ ಈ ವರ್ಷ ಇದುವರೆಗೆ ಒಟ್ಟು 7 ಮಕ್ಕಳನ್ನು ದತ್ತು ನೀಡಲಾಗಿದೆ. ಸಂಸ್ಥೆಯು ಮಕ್ಕಳ ದತ್ತು ಪ್ರಕ್ರಿಯೆಯನ್ನು 2008ರಲ್ಲಿ ಆರಂಭಿಸಿದ್ದು ಇದುವರೆಗೆ 80 ಮಕ್ಕಳನ್ನು ದತ್ತು ನೀಡಲಾಗಿದೆ. ಮೂರು ವರ್ಷಗಳಲ್ಲಿ ಮೂವರು ವಿಶೇಷ ಅಗತ್ಯದ ಮಕ್ಕಳನ್ನು ಅಮೆರಿಕದ ಪ್ರಜೆಗಳಿಗೆ ನೀಡಲಾಗಿದೆ. ಐವರು ವಿಶೇಷ ಅಗತ್ಯದ ಮಕ್ಕಳನ್ನು ಭಾರತೀಯರೇ ಪಡೆದುಕೊಂಡಿದ್ದಾರೆ.
7 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ ವಿಶೇಷ ಅಗತ್ಯದ ಮಕ್ಕಳನ್ನು ನಮ್ಮ ದೇಶದವರು ದತ್ತು ಪಡೆಯಲು ಮುಂದೆ ಬರದಿದ್ದಾಗ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಮಾರ್ಗಸೂಚನೆಯಂತೆ ಅಂತಾರಾಷ್ಟ್ರೀಯ ದತ್ತು ಸ್ವೀಕಾರ ಏಜೆನ್ಸಿ (ಆಫಾ) ಮೂಲಕ ಅಂತಾರಾಷ್ಟ್ರೀಯ ದತ್ತು ಪ್ರಕ್ರಿಯೆ ನಡೆಯುತ್ತದೆ. ಅಮೆರಿಕ, ಇಟೆಲಿಯ ದಂಪತಿ ನೋಂದಣಿ ಮಾಡಿಕೊಂಡಿದೆ. ಮ್ಯಾಚಿಂಗ್ ಆಗಿದೆ. ಅಂತಾರಾಷ್ಟ್ರೀಯ ದತ್ತು ಸ್ವೀಕಾರ ಪ್ರಕ್ರಿಯೆ 7 ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. – ಮಂಜುಳಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ದ.ಕ.
-ಸಂತೋಷ್ ಬೊಳ್ಳೆಟ್ಟು