ಹೊಸದಿಲ್ಲಿ: ಭಾರತದಲ್ಲಿ ವಿದೇಶಿ ವಿಮಾನಗಳ ಸೇವೆ ಈ ಚಳಿಗಾಲದ ಅವಧಿಯಲ್ಲಿ ಶೇ. 3.05 ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಿಜಿಸಿಎ ಹೇಳಿದೆ. ಅಕ್ಟೋಬರ್ ತಿಂಗಳ 27ರ ಬಳಿಕ ಮಾರ್ಚ್ 28ರ ವರೆಗಿನ ಸಮಯವನ್ನು ವಿಮಾನಯಾನ ಸಂಸ್ಥೆಗಳು ಚಳಿಗಾಲದ ಹಾರಾಟ ಎಂದು ಪರಿಗಣಿಸುತ್ತದೆ.
ಕಳೆದ ವರ್ಷ ಈ ಅವಧಿಯಲ್ಲಿ ಪ್ರತಿವಾರ 2,262 ವಿದೇಶಿ ವಿಮಾನಗಳು ಹಾರಾಟ ನಡೆಸಿವೆ. ಈ ವರ್ಷ ಇದರ ಪ್ರಮಾಣದಲ್ಲಿ ಶೇ. 3.05 ಏರಿಕೆಯಾಗುವ ಸಾಧ್ಯತೆ ಇದೆ. ಈ ಬಾರಿ ವಿದೇಶಗಳ 2,331 ಲೋಹದ ಹಕ್ಕಿಗಳು ಭಾರತದಲ್ಲಿ ಹಾರಾಡಲಿದೆ. ಭಾರತದಲ್ಲಿ ಈ ಒಟ್ಟು 85 ವಿದೇಶಾಂಗ ವಿಮಾನಗಳು ಕರ್ತವ್ಯ ನಿರ್ವಹಿಸುತ್ತಿವೆ. ಕಳೆದ ವರ್ಷ 86 ವಿಮಾನಗಳಿದ್ದವು.
ದೇಶಿಯ ಸಾರಿಗೆಯೂ ಸುಧಾರಣೆ
ಈ ವರ್ಷದ ಚಳಿಗಾಲದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳೂ ಹಿಂದಿನ ನಷ್ಟವನ್ನು ಮೀರಿ ಬೆಳೆಯಲಿದೆ ಎಂದು ಅಂದಾಜಿಸಲಾಗುತ್ತಿದೆ. ಜೆಟ್‌ಏರ್ ವೇಸ್ ತನ್ನ ಸೇವೆ ನಿಲ್ಲಿಸಿದ ಬಳಿಕ ಉಳಿದ ವಿಮಾನಯಾನ ಸಂಸ್ಥೆಗಳು ಆ ಬೇಡಿಕೆಯನ್ನು ಪಡೆದುಕೊಂಡಿದೆ. ಅಕೋrಬರ್ ತಿಂಗಳ ಬಳಿಕದ ತಿಂಗಳುಗಳನ್ನು ಚಳಿಗಾಲ ಎಂದು ಕರೆಯಲಾಗುತ್ತದೆ.
ಚಳಿಗಾಲದ ಆವಧಿಯಲ್ಲಿ ಪ್ರತಿ ಒಂದು ವಾರ 103 ವಿಮಾನ ನಿಲ್ದಾಣಗಳಿಗೆ 23,403 ಪ್ರಯಾಣ ಸೇವೆಗಳನ್ನು ಭಾರತೀಯ ವಿಮಾನಯಾನ ಸಂಸ್ಥೆ ನೀಡಲಿದೆ. ಕಳೆದ ಚಳಿಗಾಲದಲ್ಲಿ ಸೇವೆ ನೀಡುತ್ತಿದ್ದ ಜೆಟ್ ಏರ್‌ವೇಸ್ ಒಂದು ವಾರದಲ್ಲಿ 3,247 ವಿಮಾನಗಳನ್ನು ದೇಶದ ಬಹುತೇಕ ಪ್ರಮುಖ ವಿಮಾನ ನಿಲ್ದಾಣಗಳತ್ತ ಕಳುಹಿಸಿಕೊಡಲಾಗುತ್ತಿತ್ತು.
ವಿಸ್ಟಾರಕ್ಕೆ ಬೇಡಿಕೆ ಹೆಚ್ಚು
ಅಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕುಸಿತ ಕಂಡಿದ್ದ ವಿಸ್ಟಾರ ಸಂಸ್ಥೆ ಚಳಿಗಾಲದಲ್ಲಿ ಅತೀ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಈ ಚಳಿಗಾಲಕ್ಕೆ ವಿಸ್ತಾರದ ಬೇಡಿಕೆ ಹೆಚ್ಚಾಗಿದೆ. ಸ್ಪೈಸ್ ಜೆಟ್, ಏರ್ ಏಷ್ಯಾ ಇಂಡಿಯಾ ಬಳಿಕದ ಸ್ಥಾನದಲ್ಲಿದೆ.