Advertisement

ರೈಲ್ವೆ ನೌಕರರಿಗೆ ವಿದೇಶ ಭಾಗ್ಯ

06:15 AM Jan 31, 2018 | Team Udayavani |

ನವದೆಹಲಿ: ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ದಕ್ಷಿಣ ಕೇಂದ್ರ ವಿಭಾಗೀಯ ರೈಲ್ವೆಯ (ಎಸ್‌ಸಿಆರ್‌) ಗ್ರೂಪ್‌ ಸಿ ಮತ್ತು ಡಿ ಉದ್ಯೋಗಿಗಳಿಗೆ ಇಲಾಖೆ ವತಿಯಿಂದಲೇ ವಿದೇಶ ಪ್ರವಾಸ ಸೌಕರ್ಯ ಕಲ್ಪಿಸಲಾಗಿದೆ.  ಗ್ಯಾಂಗ್‌ಮನ್‌, ಟ್ರಾಕ್‌ಮನ್‌ ಹಾಗೂ ಇತರ ನಾನ್‌ ಗೆಜೆಟೆಡ್‌ ಅಧಿಕಾರಿಗಳುಳ್ಳ 100 ಉದ್ಯೋಗಿಗಳ ತಂಡ ಜ. 28ರಂದು ಆರು ದಿನಗಳ ಕಾಲಾವಧಿಯ ಪ್ರವಾಸಕ್ಕೆಂದು ಸಿಂಗಾಪುರ, ಮಲೇಷ್ಯಾಕ್ಕೆ ತೆರಳಿದೆ. 

Advertisement

ಪ್ರತಿ ಉದ್ಯೋಗಿಯ ಪ್ರವಾಸದ ಖರ್ಚಿನಲ್ಲಿ ಶೇ. 25ರಷ್ಟನ್ನು ಉದ್ಯೋಗಿಗಳೇ ಭರಿಸಲಿದ್ದು, ಖರ್ಚಿನ ಶೇ.75ರಷ್ಟು ಭಾಗವನ್ನು ಇಲಾಖೆ ಭರಿಸಲಿದೆ ಎಂದು ಸ್ಟಾಫ್ ಬೆನಿಫಿಟ್‌ ಫ‌ಂಡ್‌ನ‌ (ಎಸ್‌ಬಿಎಫ್) ಸಾರ್ವಜನಿಕ ಸಂಪರ್ಕಾಧಿಕಾರಿ ಎಂ. ಉಮಾಶಂಕರ್‌ ಕುಮಾರ್‌ ತಿಳಿಸಿದ್ದಾರೆ. 

ಪ್ರವಾಸಿಗರು, ಸಿಂಗಾಪುರ ಪ್ರವಾಸದಲ್ಲಿ ಪ್ರಮುಖವಾಗಿ ಯೂನಿವರ್ಸಲ್‌ ಸ್ಟುಡಿ ಯೋಸ್‌, ಸೆಂಟೋಸಾ ಆ್ಯಂಡ್‌ ನೈಟ್‌ ಸಫಾರಿಯಲ್ಲಿ ಭಾಗಿಯಾಗಲಿದ್ದು, ಮಲೇಷ್ಯಾ ಪ್ರವಾಸದ ವೇಳೆ, ಪ್ರಮುಖವಾಗಿ ಕೌಲಾಲಂ ಪುರ ನಗರ ಪ್ರದಕ್ಷಿಣೆ, ಪೆಟ್ರೋನಾಸ್‌ ಟವರ್ಸ್‌, ಬಾಟು ಕೇವ್ಸ್‌ ಹಾಗೂ ಜೆಂಟಿಂಗ್‌ ಹೈಲ್ಯಾಂಡ್ಸ್‌ ನೋಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next