Advertisement

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

03:11 PM Sep 13, 2024 | Team Udayavani |

ವಾಷಿಂಗ್ಟನ್:‌ ಅಮೆರಿಕದ ಪ್ರತಿಷ್ಠಿತ ಫೋರ್ಡ್‌ ವಾಹನ ತಯಾರಿಕಾ(Ford Motor) ಕಂಪನಿ ಭಾರತದಲ್ಲಿ ಮತ್ತೆ ತನ್ನ ವಾಹನ ತಯಾರಿಕೆಯ ಘಟಕ ತೆರೆಯಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದೆ.

Advertisement

ಫೋರ್ಡ್‌ ಕಂಪನಿ 2021ರಲ್ಲಿ ಭಾರತದಿಂದ ಹೊರನಡೆದಿತ್ತು. ಇದೀಗ ಮತ್ತೆ ತಮಿಳುನಾಡಿನ ಚೆನ್ನೈನಲ್ಲಿರುವ ವಾಹನ ತಯಾರಿಕಾ ಘಟಕ ಪುನರಾರಂಭಿಸಲು ಚಿಂತನೆ ನಡೆಸಿರುವುದಾಗಿ ಮೂಲಗಳು ಹೇಳಿವೆ.

ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ಫೋರ್ಡ್‌ ಆಡಳಿತ ಮಂಡಳಿ ಮಾತುಕತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮತ್ತೆ ಕಂಪನಿ ಪುನರಾರಂಭಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

ಲೈವ್‌ ಮಿಂಟ್‌ ವರದಿ ಪ್ರಕಾರ, ಭಾರತದಲ್ಲಿ ತನ್ನ ಘಟಕವನ್ನು ಪುನರಾರಂಭಿಸುವ ಬಗ್ಗೆ ಫೋರ್ಡ್‌ ಜೆಎಸ್‌ ಡಬ್ಲ್ಯು ಜತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದೆ.

Advertisement

2021ರಲ್ಲಿ ಭಾರತದಲ್ಲಿ ವಾಹನ ತಯಾರಿಕಾ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಫೋರ್ಡ್‌ ಮೋಟಾರ್‌ ತಿಳಿಸಿತ್ತು. ಇದೀಗ ಸ್ಟಾಲಿನ್‌ ಜತೆಗಿನ ಮಾತುಕತೆ ನಂತರ ವಾಹನಗಳ ರಫ್ತಿಗಾಗಿ ಚೆನ್ನೈ ಘಟಕವನ್ನು ಬಳಸಿಕೊಳ್ಳುವುದಾಗಿ ಫೋರ್ಡ್‌ ಮೋಟಾರ್‌ ತಮಿಳುನಾಡು ಸರ್ಕಾರಕ್ಕೆ ಲೆಟರ್‌ ಆಫ್‌ ಇಂಟೆಂಟ್‌ (LOI) ಅನ್ನು ನೀಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next