Advertisement
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
Related Articles
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹುಮತ ಇದೆಯಾ? ಅವರು ಗೆದ್ದಿದ್ದು 104, ಇದರಲ್ಲೇ ಅಧಿಕಾರ ಹಿಡಿಯುತ್ತೀವಿ ಎಂದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶ ಇಲ್ಲ. 40 ಜನ ಶಾಸಕರನ್ನು ದುಡ್ಡು ಕೊಟ್ಟು ಕೊಂಡುಕೊಳ್ತೀವಿ ಎಂದರೆ ಈ ಹಣ ಎಲ್ಲಿಂದ ಬಂದಿರಬೇಕು? ಪ್ರತಿಯೊಬ್ಬರಿಗೆ 25 ರಿಂದ 40 ಕೋಟಿ ರೂ . ಕೊಡ್ತಿದ್ದಾರೆ. ಭ್ರಷ್ಟಾಚಾರದ ಹಣವಲ್ಲವೇ ಇದು? ಭ್ರಷ್ಟಾಚಾರ ಮಾಡದೆ ಇಷ್ಟು ಹಣ ಎಲ್ಲಿಂದ ಬರುತ್ತೆ? ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆರೋಪಿಸಿದರು.
Advertisement
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯು ದ್ರೌಪದಿ ಮುರ್ಮ ಅವರನ್ನು ತನ್ನ ಅಭ್ಯರ್ಥಿ ಯನ್ನಾಗಿ ಕಣಕ್ಕೆ ಇಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ದ್ರೌಪದಿ ಮುರ್ಮ ಅವರು ಬಿಜೆಪಿ ಕಾರ್ಯಕರ್ತೆ. ಮೊದಲು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು, ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿದ್ದವರು, ಒಮ್ಮೆ ರಾಜ್ಯಪಾಲರಾಗಿದ್ದರು. ಈಗ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಿದ್ದಾರೆ.
ಇದರಲ್ಲಿ ವಿಶೇಷತೆಯಿಲ್ಲ. ಇಂಥವರನ್ನು ನಾಮಕಾವಸ್ತೆಗೆ ಕೂರಿಸಲು ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಡುತ್ತಾರೆ. ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಏನು ಕೆಲಸ ಮಾಡಿದರು? ರಾಜೇಂದ್ರ ಪ್ರಸಾದ್ ಅಥವಾ ರಾಧಾಕೃಷ್ಣನ್ ಅವರ ಹಾಗೆ ಕೆಲಸ ಮಾಡಿದ್ರಾ? ಸಾಮಾಜಿಕ ನ್ಯಾಯ ಪಾಲನೆ ಮಾಡುವುದಾದರೆ ಈ ಹೆಣ್ಣುಮಗಳನ್ನು ಆರ್. ಎಸ್.ಎಸ್ ನ ಸರಸಂಘಚಾಲಕರನ್ನಾಗಿ ಮಾಡಲಿ ಎಂದು ಹೇಳಿದರು.