ಮೈಸೂರು: ರಾಜ್ಯ ಸರ್ಕಾರ ಘೋಷಿಸಿರುವ ವೀಕೆಂಡ್ ಕರ್ಫ್ಯೂ ಅವೈಜ್ಞಾನಿಕವಾಗಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸಂಘ-ಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಒತ್ತಾಯಿಸಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಮುಂದಿನ 2 ವಾರಗಳ ಕಾಲ ವಾರಾಂತ್ಯ ಕರ್ಫ್ಯೂ ಘೋಷಿಸಿದೆ.
ಆದರೆ, ವಾಸ್ತವ ದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೆಂಗಳೂರಿನಲ್ಲಿ ಮಾತ್ರ. ಇದಕ್ಕಾಗಿ ಇಡೀ ರಾಜ್ಯದಲ್ಲಿ ಕರ್ಫ್ಯೂ ಘೋಷಿಸುವುದು ಎಷ್ಟು ಸರಿ? ಈಗಾಗಲೇ ಆಗಿರುವ ಲಾಕ್‌ಡೌನ್, ಕರ್ಫ್ಯೂಗಳಿಂದಾಗಿ ಉದ್ಯಮಿಗಳು, ಸಣ್ಣ ವ್ಯಾಪಾರಿಗಳು ಬಳಲಿ¨ªಾರೆ. ಅವಶ್ಯಕತೆ ಇದ್ದರೆ ಕರ್ಫ್ಯೂ ಜಾರಿಗೊಳಿಸಲಿ. ಅದಕ್ಕೆ ನಾವೂ ಸಹಕರಿಸುತ್ತೇವೆ. ಅದನ್ನು ಬಿಟ್ಟು ಮತ್ತೆ ಮತ್ತೆ ಅನವಶ್ಯಕವಾಗಿ ಕರ್ಫ್ಯೂ ಘೋಷಿಸುವುದಕ್ಕೆ ಮೈಸೂರು ಸಂಘ-ಸಂಸ್ಥೆಗಳ ವಿರೋಧವಿದೆ. ಕೊರೊನಾ ಬೇರೆÇÉಾ ಜ್ವರಗಳಂತೆ ಒಂದು ಜ್ವರ. ಇದು ಯಾವುದೇ ಕಾರಣಕ್ಕೂ ಮನುಕುಲವನ್ನು ಬಿಟ್ಟು ಹೋಗುವುದಿಲ್ಲ.
ಇನ್ನು ಮುಂದೆಯೂ ಕೊರೊನಾ ಪ್ರಕರಣಗಳು ಇದ್ದೇ ಇರುತ್ತವೆ. ಅದರೊಂದಿಗೆ ಬದುಕುವುದನ್ನು ನಾವು ಕಲಿಯಬೇಕು. ಪ್ರತಿ ಬಾರಿ ಲಾಕ್‌ಡೌನ್, ಕರ್ಫ್ಯೂ ಮಾಡುತ್ತಿದ್ದರೆ ಜೀವನ ನಡೆಯುವುದು ಹೇಗೆ? ಮೊದಲ ಅಲೆಯ ಸಮಯದÇÉಾದರೆ ನಾವು ಕೊರೊನಾ ಎದುರಿಸಲು ಸಿದ್ಧರಾಗಿರಲಿಲ್ಲ. ಆದರೆ ಈಗ ಎರಡು ಅಲೆಗಳನ್ನು ದಾಟಿದ್ದೇವೆ. ಈ ಹೊತ್ತಿಗಾಗಲೇ ನಮ್ಮ ವೈದ್ಯಕೀಯ ಸೌಲಭ್ಯಗಳು ಎಲ್ಲವನ್ನೂ ಎದುರಿಸುವಷ್ಟು ಶಕ್ತವಾಗಿರಬೇಕು.
ಆದ್ದರಿಂದ ಸುರಕ್ಷತೆ ಅವಶ್ಯಕತೆ ಇದೆಯೇ ಹೊರತು ಲಾಕ್‌ಡೌನ್ ಅನಗತ್ಯ. ಮೈಸೂರಿನಲ್ಲಂತೂ ಕೊರೊನಾ ಎರಡಂಕಿ ದಾಟಿಲ್ಲ. ಅಲ್ಲದೆ ಡೆತ್ ರೇಟ್ ಹಾಗೂ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ ಸಹ ಕಡಿಮೆ ಇದೆ. ಮತ್ತೇಕೆ ವಾರಾಂತ್ಯ ಕರ್ಫ್ಯೂ ಮೈಸೂರು ಪ್ರವಾಸೋದ್ಯಮವನ್ನೇ ಕೇಂದ್ರವಾಗಿರಿಸಿಕೊಂಡಿರುವ ನಗರಿ. ಮೈಸೂರಿಗೆ ಜನರು ಬರದಂತೆ ಮಾಡಿದರೆ ಇಲ್ಲಿನ ಜನರು ದುಡಿಯವುದು ಹೇಗೆ? ಜೀವನ ನಡೆಸುವುದು ಹೇಗೆ? ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿರುವ ಬೆಂಗಳೂರಿನಲ್ಲಿ ಬೇಕಿದ್ದರೆ ಸರ್ಕಾರ ಲಾಕ್‌ಡೌನ್, ಕರ್ಫ್ಯೂ ಮಾಡಲಿ. ಆದರೆ ಮೈಸೂರಿನಲ್ಲಿ ಬೇಡ.
ದಿನದ ದುಡಿಮೆ ನಂಬಿ ಕೊಂಡಿರುವ ಜನರ ಮೇಲೆ ಗಮನಹರಿಸಿ ಸರ್ಕಾರ ವಾರಾಂತ್ಯ ಕರ್ಫ್ಯೂ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ ಆಗ್ರಹಿಸುತ್ತದೆ