Advertisement

ಕಿಡಿಗೇಡಿಗಳ ಬಂಧಿಸಲು ಒತ್ತಾಯ

12:44 PM Mar 04, 2018 | Team Udayavani |

ಭಾಲ್ಕಿ: ನೆಲವಾಡ ಗ್ರಾಮದಲ್ಲಿಯ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಭಗ್ನಗೊಳಿಸಿರುವುದನ್ನು ಖಂಡಿಸಿ, ಶನಿವಾರ ಮರಾಠಾ ಸಮಾಜದ ಪ್ರಮುಖ ಜನಾರ್ಧನ ಬಿರಾದಾರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರಗೆ
ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜನಾರ್ಧನ ಬಿರಾದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾಲ್ಕಿ ತಾಲೂಕಿನಾದ್ಯಂತ ಕಾನೂನು ವ್ಯವಸ್ಥೆ ತೀರಾ ಹದಗೆಟ್ಟಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ, ರಾಜ್ಯಭಾರ ಮಾಡಿದ, ಮರಾಠಾ ಸಮಾಜದ ಕೀರ್ತಿ ಪುರುಷ ಶಿವಾಜಿ ಮಹಾರಾಜರ ಪುತ್ಥಳಿಗೆ ಅವಮಾನ ಮಾಡಿರುವುದು ಸಮಸ್ಥ ಮರಾಠಾ ಸಮುದಾಯಕ್ಕೆ ಅವಮಾನ ಮಾಡಿದಂತೆ.
ಕಾರಣ ಕಿಡಿಗೇಡಿಗಳನ್ನು ಅತಿ ಶೀಘ್ರದಲ್ಲಿಯೇ ಬಂಧಿಸಬೇಕೆಂದು ಆಗ್ರಹಿಸಿದರು.

ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಮುಂಬರುವ ದಿನಗಳಲ್ಲಿ ಮರಾಠಾ ಸಮಾಜದಿಂದ ಭಾಲ್ಕಿ ಬಂದ್‌ ಮಾಡುವುದು ಸೇರಿದಂತೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮರಾಠಾ ಸಮಾಜದ ಮುಖಂಡರಾದ ವೈಜಿನಾಥ ತಗಾರೆ, ಭರತ ತುಕದೆ, ಪ್ರದೀಪ ಬಿರಾದಾರ, ಪ್ರತಾಪ ತೀಲ, ಶರದ ದಾಪಕೆ, ಅಂಕುಶ ಡಿ., ಖಂಡೇರಾವ್‌ ಬಿರಾದಾರ, ದಿಲೀಪ ಬಿರಾದಾರ, ಪ್ರವೀಣಕುಮಾರ ಬಿರಾದಾರ, ಉಮಾಕಾಂತ ಪಾಟೀಲ, ಗುಣುವಂತ
ಮಾನಕೋಜಿ, ಅಮರ ಅವಧೂತ, ಜೋತಿಬಾ ಭೋಸಲೆ, ಪ್ರಶಾಂತ ಪವಾರ, ಭರತ ಬಿರಾದಾರ, ಕಿರಣ ಡುಕರೆ, ಸುರೇಶ ವಾಗಲೆ, ಬಾಲಾಜಿ ಮಾಲಿಪಾಟೀಲ, ರಾಜಕುಮಾರ ಹುಲಸೂರೆ, ಗೋಪಾಲ ಹುಣಸನಾಳೆ ಹಾಗೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next