Advertisement

“ಮಹಿಳೆಯರಿಗೆ ಭದ್ರತೆಯ ಖಾತ್ರಿ ಒದಗಿಸಬೇಕಿದೆ’

12:31 PM Apr 01, 2017 | |

ಉಪ್ಪಿನಂಗಡಿ : ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ತೋರುತ್ತಿರುವುದು ಸಂತಸದಾಯಕ ವಿದ್ಯಮಾನ. ಮಹಿಳಾ ಸಬಲೀಕರಣದ ಜತೆಗೆ ಮಹಿಳಾ ಭದ್ರತೆಯ ಖಾತ್ರಿ ಒದಗಿಸಬೇಕಾದ ಅಗತ್ಯತೆ ಇದೆ ಎಂದು ಜಿಲ್ಲಾ  ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.

Advertisement

ಅವರು ಉಪ್ಪಿನಂಗಡಿಯ ಶಾರದಾ ಕಲಾ ಮಂದಿರದಲ್ಲಿ ವನಿತಾ ಸಮಾಜ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಭದ್ರಾ ಭಟ್‌ ಮಾತನಾಡಿ, ಹಿಂದಿಗಿಂತ ಇಂದು ಮಹಿಳಾ ಭಾಗೀದಾರಿಕೆ ಎಲ್ಲಾ ಕ್ಷೇತ್ರದಲ್ಲೂ ಹೆಚ್ಚುತ್ತಿದ್ದು, ಮಹಿಳೆ ಮನೆಯನ್ನು ನಿಭಾಯಿಸಿಕೊಂಡು ಸಾಮಾಜಿಕ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿರುವುದು ಸಂತಸದಾಯಕ ವಿದ್ಯಾಮಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್‌ ಸದಸ್ಯೆ ಯು. ರಾಧಾ ಅವರಿಗೆ ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವನಿತಾ ಸಮಾಜದ ಅಧ್ಯಕ್ಷೆ  ಉಷಾಚಂದ್ರ ಮುಳಿಯ, ಸೀತಾ ಸತೀಶ್‌, ಹೇಮಲತಾ ಶೆಟ್ಟಿ, ಶಶಿಕಿರಣ ಬೊಳ್ಳಾವು ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮನ್‌ ಲದ್ವಾ, ಪ್ರೇಮಲತಾ ಕಾಂಚನ, ಶ್ಯಾಮಲಾ ಶೆಣೈ, ಸುಗಂಧಿ ಸುನಿಲ್‌, ಯು.ಜಿ. ರಾಧಾ, ಜಗದೀಶ್‌ ಶೆಟ್ಟಿ, ಯತೀಶ್‌ ಶೆಟ್ಟಿ ಸುವ್ಯ, ಜಯಂತ ಪುರೋಳಿ, ಎನ್‌ ಉಮೇಶ್‌ ಶೆಣೈ, ಹರಿರಾಮಚಂದ್ರ, ರಘುರಾಮ, ರಾಧವಿಶ್ವನಾಥ್‌ ಉಪಸ್ಥಿತರಿದ್ದರು.

ಗೀತಾಲಕ್ಷ್ಮೀ ತಾಳ್ತಜೆ ಕಾರ್ಯಕ್ರಮ ನಿರೂಪಿಸಿ, ಉಷಾ ಚಂದ್ರ ಸ್ವಾಗತಿಸಿ,  ಪುಷ್ಪಲತಾ ಜನಾರ್ದನ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next