ಕುಷ್ಟಗಿ: ಮನುಷ್ಯರಿಗೆ ಕೇಳಿದರೆ ನೀರು ಸಿಗಬಹುದು, ಆದರೆ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ನೀರಿನ ಕೊರತೆಯಾದರೆ ಜೀವ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಅರಿತ ಯುವಕ ಪ್ರಭು ತಾಳದ್ ನಿಡಶೇಸಿ ಕೆರೆ ಪ್ರದೇಶದ ದಡದಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟು ಪಶು ಪಕ್ಷಿ ದಾಹ ಇಂಗಿಸುವ ಕೆಲಸ ಮಾಡುತ್ತಿದ್ದಾರೆ.
ಅಲ್ಲದೇ ತಮ್ಮ ತೋಟದ ತಂತಿ ಬೇಲಿಗೆ ನೀರಿನ ಪ್ಲಾಸ್ಟಿಕ್ ಬಾಟಲಿ ಇಳಿ ಬಿಟ್ಟು ಅದರಲ್ಲಿ ನೀರು ತುಂಬಿಸುವುದು ದಿನಚರಿಯಾಗಿದೆ. ತೋಟಕ್ಕೆ ಹಣ್ಣು, ಕ್ರಿಮಿ-ಕೀಟ ತಿನ್ನಲು ಬರುವ ಪಕ್ಷಿಗಳು ನೀರು ಕುಡಿಯುತ್ತಿವೆ. ಇಲ್ಲಿ ನೀರು ಹಾಕುತ್ತಿರುವುದರಿಂದ ಪಕ್ಷಿಗಳ ಕಲರವ ಕೇಳಿ ಬರುತ್ತಿದ್ದು, ಈ ಸೇವೆ ಸಾರ್ಥಕವೆನಿಸಿದೆ. ಮೇ ತಿಂಗಳಾದರೂ ನಿಡಶೇಸಿ ಕೆರೆ ಪ್ರದೇಶದಲ್ಲಿ ನೀರಿಲ್ಲ. ನೀರಿಗಾಗಿ ಬರುವ ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ನಿರಾಸೆಯಾಗುವುದನ್ನು ತಪ್ಪಿಸಲು ನಮ್ಮದು ಅಳಿಲು ಸೇವೆ ಎನ್ನು ಮಹಾಲಿಂಗಪ್ಪ ತಾಳದ.
ಅಂತರ್ಜಲ ಕ್ಷೀಣಿಸಿದ್ದರಿಂದ ತೋಟಗಳಲ್ಲೂ ನೀರಿನ ಅಭಾವ ಕಂಡು ಬಂದಿದೆ. ಪಕ್ಷಿಗಳು ಅನ್ಯಮಾರ್ಗವಿಲ್ಲದೇ ಚಪಡಿಸುವುದುಂಟು ಈ ಪರಿಸ್ಥಿತಿ ಅರಿತು ತೊಟ್ಟಿ ಇಡಲಾಗಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿ ಆಸರೆಯಾಗುತ್ತಿದೆ. ನೀರಿನ ಸಂಪನ್ಮೂಲ ಇದ್ದವರು ಈ ಸೇವೆಗೆ ಮುಂದಾಗಬೇಕಿದೆ.
•ಪ್ರಭು ತಾಳದ, ಪಕ್ಷಿ ಪ್ರೇಮಿ
Advertisement
ಕಳೆದ ಬೇಸಿಗೆಯ ಆರಂಭದಲ್ಲಿ ಯುವಪಡೆ ಸ್ವಯಂ ಪ್ರೇರಣೆಯಿಂದ ಸದ್ದಿಲ್ಲದ ಸೇವೆ ಮಾಡುತ್ತಿದೆ. ಸ್ನೇಹಿತರಲ್ಲಿ ತಾವೇ ಹಣ ಸಂಗ್ರಹಿಸಿಕೊಂಡು ಒಂದು ಅಡಿ ಎತ್ತರವಿರುವ ಐದಾರು ಸಿಮೆಂಟ್ ತೊಟ್ಟಿಗಳನ್ನು ಖರೀದಿಸಿ, ನಿಡಶೇಸಿ ಕೆರೆ ದಡದಲ್ಲಿ ಇರಿಸಿದ್ದಾರೆ. ಪ್ರತಿ ಎರಡ್ಮೂರು ದಿನಕ್ಕೊಮ್ಮೆ ಪಕ್ಕದ ತೋಟದ ಕೊಳವೆಬಾವಿಯ ನೀರನ್ನು ತುಂಬಿಸುವ ಕಾರ್ಯ ನಡೆದಿದ್ದು, ಈ ತೊಟ್ಟಿಯಲ್ಲಿನ ನೀರನ್ನು ಕುರಿಗಾಯಿ, ದನಗಾಯಿಗಳು ಕುರಿ, ದನಗಳಿಗೆ ಕುಡಿಸುತ್ತಿದ್ದಾರೆ. ಅಲ್ಲದೇ ಅಳಿಲು, ನವಿಲು, ನರಿ, ತೋಳ, ಮುಂಗಸಿ, ಕಾಡುಹಂದಿ ಮೊದಲಾದ ಪಕ್ಷಿ, ಪ್ರಾಣಿಗಳು ಬಂದು ಇಲ್ಲಿ ನೀರು ಕುಡಿಯುತ್ತಿವೆ.
•ಪ್ರಭು ತಾಳದ, ಪಕ್ಷಿ ಪ್ರೇಮಿ