Advertisement

ಮತದಾನಕ್ಕೆ ಬಿಎಸ್‌ಎಫ್‌ನಿಂದ ರೂಟ್‌ಮಾರ್ಚ್‌

11:00 AM Apr 29, 2018 | |

ಹಳೆಯಂಗಡಿ: ಮೇ12ರಂದು ರಾಜ್ಯ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಹಳೆಯಂಗಡಿ ಸಹಿತ ಹಲವು ಪ್ರದೇಶಗಳಲ್ಲಿ ಒಂದು ವಾರದಿಂದ ಬಿಎಸ್‌ಎಫ್‌ ಸಹಿತ ಮೂಲ್ಕಿ ಪೊಲೀಸರು ರೂಟ್‌ಮಾರ್ಚ್‌ ನಡೆಸುತ್ತಿದ್ದಾರೆ.

Advertisement

ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಿಕೊಂಡಿರುವ ಮೂಲ್ಕಿ ಹೋಬಳಿಯ ಕೆ.ಎಸ್‌.ರಾವ್‌ ನಗರ, ಹಳೆಯಂಗಡಿ, ಇಂದಿರಾನಗರ, ಅತಿಕಾರಿಬೆಟ್ಟು, ಪಕ್ಷಿಕೆರೆ, ಕಿನ್ನಿಗೋಳಿ ಸಹಿತ ಹಲವು ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ರೂಟ್‌ಮಾರ್ಚ್‌ ನಡೆಸಲಾಗುತ್ತಿದೆ. ಸುಮಾರು 15 ಮಂದಿ ಬಿಎಸ್‌ಎಫ್‌ ಯೋಧರು ಹಾಗೂ ಓರ್ವ ಅಧಿಕಾರಿ ಮತ್ತು ಮೂಲ್ಕಿ ಠಾಣೆಯ 10 ಮಂದಿ ಈ ರೂಟ್‌ಮಾರ್ಚ್‌ನ ತಂಡದಲ್ಲಿ ಪಾಲ್ಗೊಂಡಿದ್ದಾರೆ. ಮೂಲ್ಕಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ಕೆ., ಸಬ್‌ ಇನ್‌ಸ್ಪೆಕ್ಟರ್‌ ಶೀತಲ್‌ ಅಲಗೂರು ಅವರು ರೂಟ್‌ಮಾರ್ಚ್‌ನ ನೇತೃತ್ವ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next