Advertisement

ಇಲಾಖೆಗಳಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೆ ಸಂಪುಟದಲ್ಲಿ ಅವಕಾಶ : ಸಿ ಟಿ ರವಿ

01:32 PM Jul 07, 2021 | Team Udayavani |

ಬೆಂಗಳೂರು : ಇಲಾಖೆಗಳಲ್ಲಿ ಯಾರು ಹೆಚ್ಚು ತೊಡಗಿಸಿಕೊಳ್ತಾರೆ ಅಂತವರಿಗೆ ಪ್ರಧಾನಿಗಳು ಅವಕಾಶ ನೀಡುತ್ತಾರೆ. ಯೋಗ್ಯತೆ ಇರುವವರು ಬಹಳ ಜನ ಇದ್ದಾರೆ, ಯಾರಿಗೆ ಯೋಗ ಇದೆ ನೋಡೋಣ. ಪ್ರಧಾನಿ ಕಾರ್ಯಾಲಯದಿಂದ ಪ್ರಕಟ ಆಗುವವರೆಗೂ ಏನೂ ಹೇಳಲು ಬಯಸುವುದಿಲ್ಲ ಎಂದು ಸಂಪುಟ ಪುನರ್ ರಚನೆ ಬಗ್ಗೆ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.

Advertisement

ಯಾರಿಗೇ ಯೋಗ ಕೂಡಿ ಬರಲಿ, ಅವರು ಪ್ರಧಾನಿ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲಿ. ಪಕ್ಷದ ಕಾರ್ಯಕರ್ತರ ಗೌರವ ಇಮ್ಮಡಿ ಮಾಡುವ ಕೆಲಸ ಮಾಡಲಿ. ಪ್ರಧಾನಿ ಕೂಡ ಭ್ರಷ್ಟಾಚಾರ ಸಹಿಸುವುದಿಲ್ಲ. ಭ್ರಷ್ಟಾಚಾರ ಹಿಂದೆಯೂ ನಡೆದಿಲ್ಲ, ಅರುಣ್ ಸಿಂಗ್ ಎಲ್ಲವನ್ನೂ ಕೂಡ ಗಮನಿಸ್ತಿದ್ದಾರೆ ಎಂದರು.

ನಾನು ಯತ್ನಾಳ್ ಅಥವಾ ಬೇರೆಯವರ ಹೇಳಿಕೆ ಬಗ್ಗೆ ಮಾತನಾಡೋದಿಲ್ಲ. ಇದಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ. ರಾಜಕಾರಣಕ್ಕೆ ಡ್ಯಾಂ ವಿಚಾರ ಬಳಸಲು ಬಯಸವುದಿಲ್ಲ. ತಜ್ಞರು ಹೇಳಿದರೆ ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದರು.

ಅಕ್ರಮ ಗಣಿಗಾರಿಕೆ ಅಲ್ಲಿ ನಡೆಯುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. ಯಧ್ಭಾವಂ ತದ್ಬವತಿ ಎನ್ನೋ ಮಾತು ಸಂಸ್ಕೃತದಲ್ಲಿದೆ. ಟೀಕೆಗಳ ಮೂಲಕವೇ ಎಲ್ಲರೂ ದೊಡ್ಡವರಾಗಲು ಸಾಧ್ಯವಿಲ್ಲ, ಸಣ್ಣವರಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ತಾನು ಯಾವ ರೀತಿ ಇದ್ದೀನೋ ಅದೇ ರೀತಿ ಭಾವಿಸಿ ಮಾತನಾಡ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next