Advertisement
ಮಂಗಳೂರು ವಿ.ವಿ. 170 ಅಂಕ ಗಳಿಸಿ ಅಗ್ರಸ್ಥಾನ ಪಡೆಯಿತು. 98.5 ಅಂಕ ಗಳಿಸಿದ ಚೆನ್ನೈಯ ಮದ್ರಾಸ್ ವಿ.ವಿ. ದ್ವಿತೀಯ ಹಾಗೂ 80 ಅಂಕ ಪಡೆದ ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿ.ವಿ. ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದೆ.
ಕೂಟದ ಅಂತಿಮ ದಿನವಾದ ಸೋಮವಾರ ಎರಡು ಕೂಟ ದಾಖಲೆಗಳು ನಿರ್ಮಾಣವಾಗಿವೆ. ಮಹಿಳೆಯರ 1,500 ಮೀ. ಓಟದಲ್ಲಿ ಪಟಿಯಾಲದ ಪಂಜಾಬಿ ವಿ.ವಿ.ಯ ಹರ್‌ಮಿಲನ್ 4 ನಿ.24.86ಸೆ.ನಲ್ಲಿ ಗುರಿ ಮುಟ್ಟುವ ಮೂಲಕ ಕ್ಯಾಲಿಕಟ್ ವಿ.ವಿ. ಯ ಚಿತ್ರಾ ಪಿ.ಯು. (4ನಿ.24.87ಸೆ.) ಅವರ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದರು.
Related Articles
Advertisement
ಜಯ್ ಶಾ, ಜ್ಯೋತಿ ಉತ್ತಮ ಆ್ಯತ್ಲೀಟ್ಸ್ಮಂಗಳೂರು ವಿ.ವಿ.ಯ ಆಳ್ವಾಸ್ ಕಾಲೇಜಿನ ಜಯ್ ಶಾ ಪ್ರದೀಪ್ ಪುರುಷರ ವಿಭಾಗದ ಉತ್ತಮ ಕ್ರೀಡಾಪಟು ಪ್ರಶಸ್ತಿ ಎತ್ತಿಕೊಂಡರು. ಮಹಿಳೆಯರಲ್ಲಿ ಆಚಾರ್ಯ ನಾಗಾರ್ಜುನ ವಿ.ವಿ.ಯ ವೈ. ಜ್ಯೋತಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. 81 ಕ್ರೀಡಾಳುಗಳಲ್ಲಿ 75 ಮಂದಿ ಆಳ್ವಾಸ್‌ನವರು
ಮಂಗಳೂರು ವಿ.ವಿ.ಯನ್ನು ಪ್ರತಿನಿ ಧಿಸಿದ ಒಟ್ಟು 81 ಕ್ರೀಡಾಪಟುಗಳ ಪೈಕಿ 75 ಮಂದಿ ಆಳ್ವಾಸ್ ಕಾಲೇಜಿನವರು. ಮಂಗಳೂರು ವಿ.ವಿ. ನಿರ್ಮಿಸಿದ ಒಟ್ಟು 4 ಕೂಟ ದಾಖಲೆಗಳು ಮತ್ತು 9 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಪಡೆದ ಕೀರ್ತಿ ಆಳ್ವಾಸ್ ಕಾಲೇಜಿನವರದ್ದೇ ಆಗಿದೆ. ಕ್ರೀಡಾಕೂಟವನ್ನು ಆಯೋಜಿಸಿದ್ದ ರಾಜೀವ್ ಗಾಂ ಧಿ ಆರೋಗ್ಯ ವಿಜ್ಞಾನಗಳ ವಿ.ವಿ. 3 ಕಂಚಿನ ಪದಕಗಳನ್ನು ಪಡೆದಿದೆ. ವ್ಯವಸ್ಥೆಗೆ ಮೆಚ್ಚುಗೆ
80ನೇ ಕ್ರೀಡಾಕೂಟದಲ್ಲಿ ದಾಖಲೆಯ 400ಕ್ಕೂ ಹೆಚ್ಚಿನ ವಿ.ವಿ.ಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾ ಅಧಿ ಕಾರಿಗಳು ಸೇರಿದಂತೆ ಒಟ್ಟು 6000ಕ್ಕೂ ಹೆಚ್ಚಿನ ಮಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರೂ ಕಿಂಚಿತ್ತೂ ಲೋಪವಾಗದಂತೆ ವ್ಯವಸ್ಥಿತವಾಗಿ ಕೂಟವನ್ನು ಆಯೋಜಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವರ ನೇತೃತ್ವದಲ್ಲಿ ನಡೆದಿದ್ದ ಆಹಾರೋಪಚಾರ, ವಾಸ್ತವ್ಯ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. 9 ಕೂಟ ದಾಖಲೆಗಳು
ಈ ಕೂಟವು ಒಟ್ಟು 9 ಕೂಟ ದಾಖಲೆಗಳಿಗೆ ಸಾಕ್ಷಿಯಾಯಿತು. ಪುರುಷರ ವಿಭಾಗದಲ್ಲಿ 5,000 ಮೀ., 10,000 ಮೀ. ಓಟ, 20 ಕಿ.ಮೀ ನಡಿಗೆ ಹಾಗೂ ಟ್ರಿಪಲ್ ಜಂಪ್, ಮಹಿಳೆಯರ ವಿಭಾಗದಲ್ಲಿ 100 ಮೀ. ಹರ್ಡಲ್ಸ್, 1,500 ಮೀ. ಓಟ, 3,000 ಮೀ. ಸ್ಟೀಪಲ್ ಚೇಸ್, 20 ಕಿ.ಮೀ. ನಡಿಗೆ, ಉದ್ದ ಜಿಗಿತದಲ್ಲಿ ಕೂಟ ದಾಖಲೆಗಳು ನಿರ್ಮಾಣವಾದವು.